ಕೆಲಸದಾಕೆಯ ಮದುವೆ ನೆರವೇರಿಸಿದ ವಿನೋದ್ ರಾಜಕುಮಾರ್

144

ಪ್ರಜಾಸ್ತ್ರ ಸುದ್ದಿ

ನೆಲಮಂಗಲ: ನಟ ವಿನೋದ್ ರಾಜಕುಮಾರ್ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವ ಯುವತಿಯ ಮದುವೆಯನ್ನು ನೆರವೇರಿಸಿದ್ದಾರೆ. ಅನ್ನಪೂರ್ಣ ಹಾಗೂ ಪೊಲೀಸ್ ಇಲಾಖೆಯಲ್ಲಿ ಹೋಮ್ ಗಾರ್ಡ್ ಆಗಿರುವ ಪ್ರಕಾಶ್ ಅವರ ಮದುವೆಯನ್ನು ಗೂಬೆಕಲ್ಲಮ್ಮ ದೇವಸ್ಥಾನದಲ್ಲಿ ನಡೆಸಲಾಯಿತು.

ವಿನೋದ್ ರಾಜಕುಮಾರ್ ಅವರ ತೋಟದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿರುವ ಅನ್ನಪೂರ್ಣಳ ಮದುವೆಯನ್ನು ಮದ್ದೂರು ತಾಲೂಕಿನ ಹುಳಗನಹಳ್ಳಿಯ ಪ್ರಕಾಶ್ ಜೊತೆ ನೂರಾರು ಜನರ ಸಮ್ಮುಖದಲ್ಲಿ ನಡೆಸಿದರು. ಇತ್ತೀಚೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಾಯಿ ಲೀಲಾವತಿ ಅವರು ಸಾರ್ವಜನಿಕರಿಗೆ ಆಸ್ಪತ್ರೆ ಕಟ್ಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!