ವಿಜಯಪುರದಲ್ಲಿ ಮತ್ತೆ 3 ಗ್ರಾಮಗಳಲ್ಲಿ ಸೀಲ್ ಡೌನ್

483

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೂ ದಿನದಿಂದ ದಿನಕ್ಕೆ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲಾ ಆಡಳಿತ ಎಷ್ಟೇ ಕಟ್ಟೆಚ್ಚರ ವಹಿಸುತ್ತಿದ್ರೂ ವೈರಸ್ ಅಟ್ಟಹಾಸ ಮುಂದುವರೆಸಿದೆ.

ಜಿಲ್ಲೆಯ ಕೋಲ್ಹಾರ ತಾಲೂಕಿನ ಹಣಮಾಪುರ, ಮಟ್ಟಿಹಾಳ, ಕೋಲ್ಹಾರಪಟ್ಟಣದಲ್ಲಿ ತಲಾ ಒಂದೊಂದು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ವೈರಸ್ ದೃಢವಾಗಿರುವ ರೋಗಿಗಳ ಮನೆಯಿಂದ 100 ಮೀಟರ್ ಪ್ರದೇಶವನ್ನು ಮುಳ್ಳು ಕಂಟಿಯಿಂದ ಸೀಲ್ ಡೌನ್ ಮಾಡಲಾಗಿದೆ. ಆ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿಲಾಗಿದೆ.

ಒಟ್ಟಿನಲ್ಲಿ ದಿನೆದಿನೆ ಹಳ್ಳಿಗಳೂ ವೈರಸ್ ವೇಗವಾಗಿ ಹರಡುತ್ತಿದ್ದು, ಇದಕ್ಕೆ ಸ್ಥಳೀಯರು ಸರ್ಕಾರದ ಆದೇಶ ಪಾಲಿಸಬೇಕು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಬಳಸಬೇಕು. ಅಲ್ಲದೇ, ಅನಗತ್ಯವಾಗಿ ಸಾರ್ವಜನಿಕರು ಹೊರಗಡೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.




Leave a Reply

Your email address will not be published. Required fields are marked *

error: Content is protected !!