ನಾಗಮಂಗಲದ ಮಹಿಳೆಯರಿಬ್ಬರು ನಾಪತ್ತೆ

262

ಪ್ರಜಾಸ್ತ್ರ ಸುದ್ದಿ

ನಾಗಮಂಗಲ: ವಿವಾಹಿತ ಮಹಿಳೆಯರಿಬ್ಬರು ನಾಪತ್ತೆಯಾದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಬೆಳ್ಳೂರು ಹೋಬಳಿಯ ಲಕ್ಷ್ಮಿಪುರ ವಡೇರಹಳ್ಳಿ ಗ್ರಾಮದ ಕೃಷ್ಣಪ್ಪ ರವರ ಹೆಂಡತಿ ನಂಜಮ್ಮ (50) ಕಾಣೆಯಾಗಿದ್ದಾರೆ. ಜುಲೈ 27ರಂದು ಬೆಳಗ್ಗೆ ಬೆಳ್ಳೂರು ಸಂತೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಸ್ ಬಂದಿಲ್ಲ.

ಇನ್ನು ಮತ್ತೊಂದು ಪ್ರಕರಣದಲ್ಲಿ ಬೆಳ್ಳೂರು ಹೋಬಳಿ ಹೊಸೂರು ಕಾಲೋನಿ ನಿವಾಸಿ ಗಂಗಾಧರ ಎಂಬುವರ ಹೆಂಡತಿ ಹೇಮಾ(23) ಜುಲೈ 30ರಂದು ನಾಪತ್ತೆಯಾಗಿದ್ದಾರೆ. ಅಂದು ಬೆಳಗ್ಗೆ ಎಂದಿನಂತೆ ಆಸ್ಪತ್ರೆಯ ಕೆಲಸಕ್ಕೆಂದು ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ. ಕಾಣೆಯಾದ ಮಹಿಳೆಯರಿಬ್ಬರ ಬಗ್ಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳ್ಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!