ಸಿಂದಗಿಯಲ್ಲಿ ಮಹಿಳೆ ಮಿಸ್ಸಿಂಗ್

682

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ. ಪಟ್ಟಣದ ನಿವಾಸಿ 50 ವರ್ಷದ ಉಮಾ ಶಾಂತಗೌಡ ಪಾಟೀಲ ಅನ್ನೋ ಮಹಿಳೆ ಕಾಣೆಯಾಗಿದ್ದಾರೆ. ಈ ಸಂಬಂಧ ಪತಿ ಶಾಂತಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ 30ರಂದು ಹೊರಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ಇದುವರೆಗೂ ವಾಪಸ್ ಬಂದಿರುವುದಿಲ್ಲ. ಅಲ್ದೇ, ಸಂಬಂಧಿಕರ ಮನೆಗೂ ಸಹ ಹೋಗಿರುವುದಿಲ್ಲವೆಂದು ತಿಳಿದು ಬಂದಿದೆ. ಹೀಗಾಗಿ ಈ ಸಂಬಂಧ ಪತಿ ಶಾಂತಗೌಡ, ಗುರುವಾರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆ ಉಮಾ ಎಂಬುವರು ಎಲ್ಲಿಯಾದ್ರೂ ಪತ್ತೆಯಾದ್ರೆ ಸಿಂದಗಿ ಪೊಲೀಸ್ ಠಾಣೆ(08488-221333) ಅಥವ ವಿಜಯಪುರ ಕಂಟ್ರೋಲ್(08352-250844) ರೂಮಿಗೆ ಮಾಹಿತಿ ನೀಡಿಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!