ಸೆಮಿಫೈನಲ್ ನಲ್ಲಿ ಸೋತ ಮಹಿಳಾ ಹಾಕಿ ಟೀಂ

217

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ: ಒಲಿಂಪಿಕ್ಸ್ ಕ್ರೀಡಾ ಇತಿಹಾಸದಲ್ಲಿಯೇ ಭಾರತೀಯ ಮಹಿಳಾ ಹಾಕಿ ತಂಡ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶ ಮಾಡಿತ್ತು. ಹೀಗಾಗಿ ಫೈನಲ್ ಗೆ ಏರುವ ಮೂಲಕ ದೊಡ್ಡ ಸಾಧನೆ ಮಾಡಲಿದೆ ಎಂದು ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿತ್ತು. ಆದ್ರೆ, ಅರ್ಜೆಂಟೀನಾ ವಿರುದ್ಧ ಸೋತು ಅದು ಹುಸಿಯಾಗಿದೆ.

ಸೆಮಿಫೈನಲ್ ನಲ್ಲಿ ಅರ್ಜೆಂಟೀನಾ ವಿರುದ್ಧ 1-2 ಅಂತರದಿಂದ ಮಹಿಳಾ ಹಾಕಿ ತಂಡ ಶರಣಾಯ್ತು. ಇದೀಗ ಇರುವ ಅವಕಾಶ ಎಂದರೆ ಕಂಚಿಗಾಗಿ ಹೋರಾಟ ಮಾಡುವುದು. ಪುರುಷರ ಹಾಕಿ ತಂಡಕ್ಕೂ ಇರುವುದು ಇದೊಂದೇ ಅವಕಾಶ.

ಪಂದ್ಯದ ಎರಡನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ದಾಖಲಿಸಿದ್ರು. ಮುಂದೆ ಅರ್ಜೆಂಟೀನಾದ ಮಾರಿಯಾ ಬ್ಯಾರಿಯೊನ್ಯುವೊ 18ನೇ ನಿಮಿಷದಲ್ಲಿ ಹಾಗೂ 36ನೇ ನಿಮಿಷದಲ್ಲಿ 2 ಗೋಲು ಬಾರಿಸುವ ಮೂಲಕ ಭಾರತದ ಗೆಲುವು ಕಸಿದಿಕೊಂಡರು. ಸಾಕಷ್ಟು ಸವಾಲುಗಳನ್ನ ಎದುರಿಸಿ ಸೆಮಿಫೈನಲ್ ವರೆಗೂ ಬಂದಿರುವುದು ನಿಜಕ್ಕೂ ಖುಷಿ ಸಂಗತಿ. ಇರುವ ಇನ್ನೊಂದು ಅವಕಾಶದಲ್ಲಿ ಕಂಚು ಗೆಲ್ಲಲಿ ಅನ್ನೋದು ಎಲ್ಲರ ಆಶಯ.




Leave a Reply

Your email address will not be published. Required fields are marked *

error: Content is protected !!