ಭೈರತಿ ರಣಗಲ್, ಕೃಷ್ಣಂ ಪ್ರಣಯ ಸಖಿ ಪೋಸ್ಟರ್ ರಿಲೀಸ್

85

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಂಚುರಿ ಸ್ಟಾರ್ ನಟ ಶಿವರಾಜಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದ ಪೋಸ್ಟರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪೋಸ್ಟರ್ ಯುಗಾದಿ ಹಬ್ಬದಂದು ರಿಲೀಸ್ ಮಾಡಲಾಗಿದೆ.

ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳಿರುವ ಭೈರತಿ ರಣಗಲ್ ಚಿತ್ರದ ಹೊಸ ಪೋಸ್ಟರ್ ಟ್ವಿಸ್ಟ್ ಕೊಟ್ಟಿದೆ. ಪೋಸ್ಟರ್ ನಲ್ಲಿ ಶಿವಣ್ಣ ಲಾಯರ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಫ್ತಿ ಚಿತ್ರದ ಮುಂದುವರೆದ ಭಾಗ ಈ ಚಿತ್ರ. ಮಫ್ತಿಯಲ್ಲಿ ಶಿವಣ್ಣನ ರೋಲ್ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ ನೋಡಿದರೆ ಅಡ್ವಕೆಟ್ ಗೆಟಪ್ ಪೋಸ್ಟರ್ ನೋಡಿದ ಅಭಿನಿಗಳಿಗೆ ಸಾಕಷ್ಟು ಕುತೂಹಲ ಮೂಡಿದೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಆಗಿದೆ.

 ನಟ ಗೋಲ್ಡನ್ ಸ್ಟಾರ್ ಗಣೇಶ್, ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ಮಿಂಚುತ್ತಿದ್ದು, ಇದು ಅವರ 41ನೇ ಸಿನಿಮಾವಾಗಿದೆ. ಶ್ರೀನಿವಾಸ್ ರಾಜು ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಸ ಪೋಸ್ಟರ್ ನಲ್ಲಿ 8 ನಟಿಯರು ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.

ಇಬ್ಬರು, ಮೂವರು ನಟಿಯರೊಂದಿಗೆ ಗಣೇಶ್ ಸಿನಿಮಾ ಮಾಡಿದ್ದಾರೆ. ಆದ್ರೆ, ಈ ಚಿತ್ರದ ಪೋಸ್ಟರ್ ನಲ್ಲಿ 8 ನಟಿಯರು ನೋಡಿದವರಿಗೆ ಕುತೂಹಲ ಹೆಚ್ಚಿದೆ. ಇದು ಹಾಡಿನ ಪೋಸ್ಟರ್ ಇದೆಯೋ ಅಥವ ಇದು ಹೊಸ ದಾಖಲೆಯಾಗುತ್ತಾ ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!