ನೇರವಾಗಿ ಫೈನಲ್ ಎಂಟ್ರಿ ಪಡೆದ ಟೀಂ ಇಂಡಿಯಾ

397

ಸಿಡ್ನಿ: ಮಹಿಳೆಯರ ಟಿ-20 ವರ್ಲ್ಡ್ ಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನೇರವಾಗಿ ಫೈನಲ್ ಎಂಟ್ರಿ ಪಡೆದಿದೆ. ಸೆಮಿಫೈನಲ್ ಪಂದ್ಯವಾಡದೆ ಸೀದಾ ಫೈನಲ್ ಸ್ಥಾನಕ್ಕೇರಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಆಡಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಐಸಿಸಿ ನಿಯಮದ ಪ್ರಕಾರ ಕನಿಷ್ಟ 10 ಓವರ್ ಗಳ ಪಂದ್ಯವಾದ್ರೂ ನಡೆಯಬೇಕಿದೆ. ಆದ್ರೆ, ಮಳೆಯಾಟದಿಂದ ಇದು ಸಹ ನಡೆಸಲು ಆಗಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನ ರದ್ದು ಮಾಡಲಾಗಿದೆ. ಇದ್ರಿಂದಾಗಿ ಟೂರ್ನಿಯಲ್ಲಿ ಸತತ 4 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಹರ್ಮನ್ ಪ್ರೀತ್ ಕೌರ್ ಟೀಂ ನೇರವಾಗಿ ಫೈನಲ್ ತಲುಪಿದೆ. ಇದು ಭಾರತೀಯ ಆಟಗಾರರು ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ತಂದಿದೆ.




Leave a Reply

Your email address will not be published. Required fields are marked *

error: Content is protected !!