ಭಾರತಕ್ಕೆ ‘ಫೈನಲ್’ ಶಾಕ್ ಕೊಟ್ಟ ಆಸೀಸ್

374

ಮಹಿಳಾ ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಫೈನಲ್ ನಲ್ಲಿ ಯಡವಿದೆ. ಆಸ್ಟ್ರೇಲಿಯಾ ನೀಡಿದ್ದ 185 ರನ್ ಗಳ ಬಿಗ್ ಸ್ಕೋರ್ ಬೆನ್ನುಹತ್ತಿದ್ದ ಹರ್ ಸೀರ್ಮತ್ ಕೌರ್ ಬಳಗ ಕೇವಲ 19.1 ಓವರ್ ಗಳಿಗೆ 99 ರನ್ ಗಳಿಗೆ ಆಲೌಟ್ ಆಗಿದೆ.

ದೀಪ್ತಿ ಶರ್ಮಾ 33, ವೇದಾ ಕೃಷ್ಣಮೂರ್ತಿ 19 ಹಾಗೂ ರಿಚ್ಚಾ ಘೋಷ್ 18 ರನ್ ಗಳೇ ಬಿಗ್ ಸ್ಕೋರ್ ಆಗಿದೆ. ಮೇಗನ್ ಸ್ಕಾಟ್ ಹಾಗೂ ಜೆಸ್ ಜಾನ್ಸನ್ ಮಾರಕ ಬೌಲಿಂಗ್ ನಿಂದಾಗಿ ಭಾರತೀಯ ಆಟಗಾರರು ಕ್ರಿಸ್ ನಲ್ಲಿ ಗಟ್ಟಿಯಾಗಿ ನಿಲ್ಲಲು ಆಗದೇ ಪೆವಿಲಿಯನ್ ಹಾದಿ ಹಿಡಿದ್ರು. ಹೀಗಾಗಿ 99 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲು ಒಪ್ಪಿಕೊಳ್ಳಬೇಕಾಯ್ತು. ಈ ಮೂಲಕ ಆಸೀಸ್ 5ನೇ ಬಾರಿ ಟಿ-20ನಲ್ಲಿ ವಿಶ್ವ ಚಾಂಪಿಯನ್ಸ್ ಆಯ್ತು.

ಸ್ಟಾರ್ ಆಟಗಾರತಿ ಸ್ಮೃತಿ ಮಂದಾನ, ಕ್ಯಾಪ್ಟನ್ ಹರ್ ಸಿರ್ಮತ್ ಕೌರ್, ಶಿಖಾ ಪಾಂಡೆ, ಸರಣಿ ಪೂರ್ತಿ ಅಬ್ಬರಿಸಿದ್ದ ಶಿಫಾಲಿ ಶರ್ಮಾ ಎಲ್ಲರೂ ಕೈ ಕೊಟ್ಟ ಪರಿಣಾಮ ಭಾರತಕ್ಕೆ ಸೋಲಾಯ್ತು. ಹೀಗಾಗಿ ಕೌರ್ ಟೀಂ ಹೊಸ ಕನಸೊಂದು ಹಾಗೆಯೇ ಉಳಿಯಿತು.

ಆಸ್ಟ್ರೇಲಿಯಾ ಪರ ಮೇಗನ್ ಸ್ಕಾಟ್ 18 ರನ್ ಗೆ 4 ವಿಕೆಟ್ ಪಡೆದ್ರೆ ಜೆಸ್ ಜಾನ್ಸನ್ 20 ರನ್ ಗೆ 3 ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ್ರು. ಕಿಮೆನ್ಸ್ 1 ವಿಕೆಟ್ ಪಡೆದ್ರು. ಸರಣಿ ಪೂರ್ತಿ ಗೆಲುವಿನ ಅಲೆಯಲ್ಲಿಯೇ ತೇಲಿಕೊಂಡು ಬಂದ ಕೌರ್ ಟೀಂ ಕೊನೆಯ ಆಟದಲ್ಲಿ ಮುಗ್ಗರಿಸಿ ಚಾಂಪಿಯನ್ಸ್ ಪಟ್ಟವನ್ನ ತಪ್ಪಿಸಿಕೊಂಡಿದ್ದು ಇಂಡಿಯನ್ ಕ್ರಿಕೆಟ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!