ದೇಶ್ಯಾದ್ಯಂತ ಚರ್ಚೆಯಾಗಿದ್ದ ಮರ್ಯಾದೆ ಹತ್ಯೆ: ಯುವತಿ ತಂದೆ ಸೂಸೈಡ್!

904

ಹೈದ್ರಾಬಾದ್: 2018ರಲ್ಲಿ ದಲಿತ ಯುವಕನ ಹತ್ಯೆ ದೇಶ್ಯಾದ್ಯಂತ ಸುದ್ದಿಯಾಗಿತ್ತು. ಅಮೃತಾ ಅನ್ನೋ ಯುವತಿಯೊಂದಿಗೆ ಪ್ರಣಯ ಅನ್ನೋ ದಲಿತ ಯುವಕ ವಿವಾಹವಾಗಿದ್ದ. ಇದ್ರಿಂದಾಗಿ ತಮ್ಮ ಮರ್ಯಾದೆ ಹೋಯ್ತು ಎಂದು ಯುವತಿಯ ತಂದೆ ಹತ್ಯೆ ಮಾಡಿಸಿದ್ದ. ಈ ಕೇಸಿನ ಪ್ರಮುಖ ಆರೋಪಿಯಾಗಿದ್ದ ಅಮೃತಾ ತಂದೆ ಮಾರುತಿರಾವ ಜೈಲು ಸೇರಿದ್ದ.

ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ ಮಾರುತಿರಾವ, ಹೈದ್ರಾಬಾದ್ ನ ಆರ್ಯವೈಶ್ಯ ಭವನದಲ್ಲಿ ಉಳಿದುಕೊಂಡಿದ್ದ. ಮಾರುತಿರಾವ ಪತ್ನಿ ಅವರಿಗೆ ಎಷ್ಟು ಬಾರಿ ಫೋನ್ ಮಾಡಿದ್ರೂ ಅವರು ತೆಗೆದಿರಲಿಲ್ಲ. ಹೀಗಾಗಿ ಭವನದ ಸಿಬ್ಬಂದಿಗೆ ಫೋನ್ ಮಾಡಿ ವಿಷ್ಯ ತಿಳಿಸಿದ್ದಾರೆ. ಸಿಬ್ಬಂದಿ ರೂಮಿಗೆ ಹೋಗಿ ನೀಡಿದಾಗ ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವುದು ಬೆಳಕಿಗೆ ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸ್ರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ. 2018ರಲ್ಲಿ ಅಳಿಯನ ಕೊಲೆಯ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿ ವಾರಂಗಲ್ ಜೈಲು ಸೇರಿದ್ದ. ಇತ್ತೀಚೆಗೆ ಜಾಮೀನು ಮೇಲೆ ಹೊರಗೆ ಬಂದಿದ್ದ.

2018ರಲ್ಲಿ ನಡೆದಿತ್ತು ಮರ್ಯಾದೆ ಹತ್ಯೆ:

ಆಂಧ್ರದ ನಲ್ಗೊಂಡ ಜಿಲ್ಲೆ ಮಿರ್ಯಾಲಗೂಡು ನಿವಾಸಿಯಾಗಿದ್ದ ಮಾರುತಿರಾವ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿದ್ದ. ಕೋಟ್ಯಾಂತರ ಆಸ್ತಿ ಮಾಡಿದ್ದ ಈತನ ಮಗಳು ಅಮೃತಾ, ದಲಿತ ಯುವಕ ಪ್ರಣಯನನ್ನು ಪ್ರೀತಿಸಿದ್ಳು. ಕುಟುಂಬಸ್ಥರ ವಿರೋಧದ ನಡುವೆ ಮದ್ವೆಯಾಗಿದ್ಳು. 2018, ಸಪ್ಟೆಂಬರ್ 15 ರಂದು, 5 ತಿಂಗಳು ಗರ್ಭಿಣಿಯಾಗಿದ್ದ ಹೆಂಡ್ತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ಪ್ರಣಯನನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಪ್ರಣಯ ಹತ್ಯೆಗೆ ನಾಲ್ಕು ಬಾರಿ ಪ್ಲಾನ್ ಮಾಡಲಾಗಿತ್ತು. 5ನೇ ಬಾರಿಗೆ ಹಂತಕರ ಪ್ಲಾನ್ ಸಕ್ಸಸ್ ಆಗಿತ್ತು. ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಮೃತಾಗೆ ಪರಿಹಾರ ನೀಡಿದ ರಾಜ್ಯ ಸರ್ಕಾರ, ಸರ್ಕಾರಿ ನೌಕರಿ ಸಹ ನೀಡಿದೆ. 2019ರಲ್ಲಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆ ಪುಟ್ಟ ಮಗುವಿನೊಂದಿಗೆ ಪ್ರಣಯ ನೆನಪಿನಲ್ಲಿ ಜೀವನ ಮಾಡ್ತಿದ್ದಾಳೆ.




Leave a Reply

Your email address will not be published. Required fields are marked *

error: Content is protected !!