16 ಸಾಧಕಿಯರಿಗೆ ‘ನಾರಿ ಶಕ್ತಿ ಪುರಸ್ಕಾರ್’

391

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ ಅವರು, 16 ಜನ ಸಾಧಕ ಮಹಿಳೆಯರಿಗೆ ನಾರಿ ಶಕ್ತಿ ಪುರಸ್ಕಾರ್ ನೀಡಿ ಗೌರವಿಸಿದ್ದಾರೆ. ಕೇರಳದ 106 ವರ್ಷದ ಭಾಗೀರತಿ ಹಾಗೂ 96 ವರ್ಷದ ಕಾತ್ಯಾಯಾನಿ ಅನ್ನೋ ಹಿರಿಯರು ಶಿಕ್ಷಣ ಪಡೆದು ಮಾದರಿಯಾಗಿದ್ದು, ಇವರಿಬ್ಬರು ನಾರಿ ಶಕ್ತಿ ಪುರಸ್ಕಾರ್ ಪಡೆದಿದ್ದಾರೆ.

ಬಿಹಾರನ ದುವಾರಿ ಪಂಚಾಯ್ತಿಯ ಬಿನಾ ದೇವಿ ಕೃಷಿ ಸಾಧನೆಗೆ, ಕಾನ್ಪೂರದಲ್ಲಿ 4000 ಶೌಚಾಲಯ ನಿರ್ಮಿಸಿದ ಕಲಾವತಿ ದೇವಿ, ಮೊದಲ ಮಹಿಳಾ ಯುದ್ಧ ವಿಮಾನ ಸೇರಿದ ಅವನಿ ಚತುರ್ವೇದಿ, ಭೌವನ್ ಕಾಂತ್, ಮೋಹನಾ ಸಿಂಗ್ ಶಾಸ್ತ್ರೀಯ ಸಂಗೀತದಲ್ಲಿ ಕೊಲ್ಕತ್ತಾ ಮೂಲದ ಕೌಶಿಕಿ, ಲದಾಕ್ ನ ನಿಲ್ಜಾ ವಾಂಗಮೋ ಸೇರಿದಂತೆ 16 ಜನ ಸಾಧಕಿಯರು ನಾರಿ ಶಕ್ತಿ ಪುರಸ್ಕಾರ್ ಪಡೆದಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ತಮ್ಮದೆಯಾದ ಸಾಧನೆ ಮಾಡಿದ 16 ಜನ ಸಾಧಕಿಯರಿಗೆ ಈ ಗೌರವ ನೀಡಿ ಸನ್ಮಾಸಲಾಗಿದೆ. ಈ ವೇಳೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲಿದ್ರು.




Leave a Reply

Your email address will not be published. Required fields are marked *

error: Content is protected !!