ಭಾರತಕ್ಕೆ 185 ರನ್ ಟಾರ್ಗೆಟ್.. ಟೀಂ ಇಂಡಿಯಾಗೆ ಆರಂಭಿಕ ಆಘಾತ

371

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್ ಟೀಂ ಭರ್ಜರಿ ಆಟವಾಡಿದೆ. ಆರಂಭಕ ಜೋಡಿ ಹೀಲಿ ಹಾಗೂ ಮೋನಿ ಅಬ್ಬರದ ಆಟದಿಂದಾಗಿ 185 ರನ್ ಗಳ ಬಿಗ್ ಟಾರ್ಗೆಟ್ ನೀಡಿದೆ.

ಹೀಲಿ ಮೋನಿ 10 ಓವರ್ ಗೆ 91 ರನ್ ಗಳಿಸುವ ಮೂಲಕ ಭದ್ರ ಬುನಾದಿ ರೆಡಿ ಮಾಡಿತು. ಅದಾಗ್ಲೇ ಹೀಲಿ ಅರ್ಧ ಶತಕ ಗಳಿಸಿದ್ಳು. 11.4 ಓವರ್ ನಲ್ಲಿ ರಾಧಾ ಯಾದವ ಬೌಲಿಂಗ್ ನಲ್ಲಿ ಎಜೆ ಹೀಲಿ 75 ರನ್ ಗಳಿಸಿ ಔಟ್ ಆದ್ಳು. ಬಾತ್ ಮೋನಿ 78 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದ್ಳು. ಅಂತಿಮವಾಗಿ 20 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿ ಭಾರತಕ್ಕೆ ಬಿಗ್ ಟಾರ್ಗೆಟ್ ನೀಡಿದೆ.

ಭಾರತ ಪರ ದೀಪ್ತಿ ಶರ್ಮಾ 2 ಹಾಗೂ ಪೂನಂ ಯಾದವ, ರಾಧಾ ಯಾದವ ತಲಾ 1 ವಿಕೆಟ್ ಪಡೆದ್ರು. ಶಿಖಾ ಪಾಂಡೆ 4 ಓವರ್ ಗಳಲ್ಲಿ 52 ರನ್ ನೀಡಿ ದುಬಾರಿಯಾದ್ರು. ಕನ್ನಡತಿ ರಾಜೇಶ್ವರಿ ಗಾಯಕ್ವಾಡ 4 ಓವರ್ ಗಳಲ್ಲಿ 29 ರನ್ ನೀಡಿದ್ರು. ಆದ್ರೆ ವಿಕೆಟ್ ಪಡೆಯುವಲ್ಲಿ ವಿಫಲರಾದ್ರು.

ಇನ್ನು ಬಿಗ್ ಸ್ಕೋರ್ ಚೇಸ್ ಮಾಡ್ತಿರುವ ಟೀಂ ಇಂಡಿಯಾಗೆ ಆಸೀಸ್ ಬೌಲರ್ ಗಳು ಆರಂಭಿಕ ಆಘಾತ ನೀಡಿದ್ದಾರೆ. ಟೂರ್ನಿ ತುಂಬಾ ಅದ್ಭುತವಾಗಿ ಆಡಿಕೊಂಡು ಬಂದಿದ್ದ ಶಫಾಲಿ ಶರ್ಮಾ ಕೇವಲ 2 ರನ್ ಗೆ ಔಟ್ ಆಗಿದ್ದಾರೆ. ಇನ್ನು ಜೆಮಿಹಾ ಡಕ್ ಔಟ್ ಆಗಿದ್ದು, ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. 3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದೆ. ಸ್ಮೃತಿ ಮಂದಾನಾ(11) ಹಾಗೈ ತಾನಿಯಾ(2) ಆಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!