ಭಜ್ಜಿ ನಟನೆಯ ಫಸ್ಟ್ ಮೂವಿ ಟೀಸರ್ ಔಟ್

344

ಇಂಡಿಯನ್ ಕ್ರಿಕೆಟ್ ಟೀಂನ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅವರು ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಿದ್ದಾರೆ. ಯೆಸ್, ಸ್ಪೀನ್ ಬೌಲರ್ ಭಜ್ಜಿ ಖ್ಯಾತಿಯ ಹರ್ಭಜನ್ ಸಿಂಗ್, ಫ್ರೆಂಡ್ಶಿಪ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.

ಜಾನ್ ಪಾಲ್ ರಾಜ್ ಹಾಗೂ ಶ್ಯಾಮಸೂರ್ಯ ನಿರ್ದೇಶನದ ಈ ಚಿತ್ರದಲ್ಲಿ ಸೌಥ್ ಇಂಡಿಯನ್ ಖ್ಯಾತ ನಟ ಅರ್ಜುನ ಸರ್ಜಾ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಭಜ್ಜಿ, ಇದೆ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ.

ಕ್ರಿಕೆಟ್ ಅಂಗಳದಲ್ಲಿ ಮ್ಯಾಜಿಕ್ ಮಾಡಿರುವ ಭಜ್ಜಿ ಈಗ ಸ್ಕ್ರೀನ್ ಮೇಲೆ ಕಮಾಲ್ ಮಾಡಲು ರೆಡಿಯಾಗಿದ್ದಾರೆ. 56 ಸೆಕೆಂಡ್ ಟೀಸರ್ ನಲ್ಲಿ ಸಸ್ಪೆನ್ಸ್ ಕ್ರೈಂ ಥಿಲ್ಲರ್ ಜೊತೆಗೆ ಸ್ನೇಹದ ಎಳೆ ಇರುವುದು ಕಾಣಿಸುತ್ತೆ. ತೆಲುಗು ಜೊತೆಗೆ ಹಿಂದಿ, ಪಂಜಾಬಿ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ ಎನ್ನಲಾಗ್ತಿದೆ. ಹರ್ಭಜನ್ ಸಿಂಗ್ ಬೌಲಿಂಗ್ ನೋಡಿದ ಫ್ಯಾನ್ಸ್ ಈಗ ಆ್ಯಕ್ಟಿಂಗ್ ನೋಡಲು ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!