ವರಮಹಾಲಕ್ಷ್ಮಿ ಹಬ್ಬಕ್ಕೆ ‘ಯುವರತ್ನ’ನ ನ್ಯೂ ಲುಕ್

320

ಪ್ರಜಾಸ್ತ್ರಾ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತರಾಜಕುಮಾರ ನಟನೆಯ ಯುವರತ್ನ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೊಸ ಲುಕ್ ಬಿಟ್ಟಿದ್ದು, ಅಭಿಮಾನಿಗಳ ಮನಸ್ಸನ್ನ ಸ್ವಲ್ಪ ತಣ್ಣಗೆ ಮಾಡುವ ಕೆಲಸ ಮಾಡಲಾಗಿದೆ.

‘ನಾವು ಯಾವತ್ತೂ ಬೇರೆಯವರ ರೋಟಲ್ಲಿ ಟ್ರಾವೆಲ್ ಆಗಲ್ಲ. ನಮ್ದೆ ದಾರಿ ನಮ್ದೆ ಸವಾರಿ.. ಪಕ್ಕದಲ್ಲಿ ಫೆರಾರಿ ಹೋದ್ರೂ ತಲೆಕೆಡಿಸಿಕೊಳ್ಳುವುದಿಲ್ಲ’ ಅನ್ನೋ ಮಾಸ್ ಡೈಲಾಗ್ ಅಪ್ಪು ಅಭಿಮಾನಿಗಳಿಗೆ ಒಂದಿಷ್ಟು ಕಿಕ್ ಕೊಡಲಿದೆ.

ಕರೋನಾ ಲಾಕ್ ಡೌನ್ ನಿಂದಾಗಿ ಸಿನಿಮಾದ ಕೆಲವೊಂದು ಕೆಲಸಗಳು ಹಾಗೇ ಉಳಿದ್ವು. ಇದೀಗ ನಿಧಾನವಾಗಿ ಒಂದಿಷ್ಟು ಕೆಲಸ ನಡೆಯುತ್ತಿದ್ದು, ಆದಷ್ಟು ಬೇಗ ಚಿತ್ರ ರಿಲೀಸ್ ಗೆ ನಿರ್ದೇಶಕ ಸಂತೋಷ ಆನಂದರಾಮ ಅವರ ಟೀಂ ರೆಡಿಯಾಗ್ತಿದೆ.




Leave a Reply

Your email address will not be published. Required fields are marked *

error: Content is protected !!