ಬೆನ್ನುಹುರಿ ರೋಗಿಗಳಿಗೆ ಬೇಕು ಆತ್ಮಸ್ಥೈರ್ಯ

219

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯನ್ನು ಆಚರಿಸಲಾಯಿತು. ವಿಜಯಪುರದ ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ, ಹೆಚ್.ಸಿ.ಎಲ್ ಫೌಂಡೇಷನ್, ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತ ಅಂಗವಿಕಲರ ಸಂಘ ವಿಜಯಪುರ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯಪುರ ನೇತ್ರ ತಜ್ಞ ಡಾ.ವಿಜಯಮಹಾಂತೇಶ ಬಿಜಾಪೂರ, ಬೆನ್ನುಹುರಿ ಅಪಘಾತದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಹಾಗೂ ಉತ್ತಮ ಜೀವನಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಜೊತೆಗೆ ಆರೋಗ್ಯವಂತ ಬದುಕಿಗೆ ಸೂಕ್ತ ಸಲಹೆ ಮತ್ತು ಸಹಕಾರ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಬೆನ್ನುಹುರಿ ಅಪಘಾತಕ್ಕೊಳಗಾದ ರೋಗಿಗಳಿಗೆ ಎಪಿಡಿ ಸಂಸ್ಥೆಯ ಹಿರಿಯ ಫೀಜಿಯೋಥೆರಫಿಸ್ಟ್ ಡಾ.ಶ್ರುತಿ ಗಚ್ಚಿ ವ್ಯಾಯಾಮದ ತರಬೇತಿ ನೀಡಿದರು. ರಕ್ತಿನಿಧಿ ಘಟಕದ ಅಧಿಕಾರಿ ರಾಜು ನರಗೋದಿ ಮಾತನಾಡಿದರು.

ಈ ವೇಳೆ ಎಪಿಡಿ ಸಂಸ್ಥೆಯ ಕಿರಿಯ ಫೀಜಿಯೋಥೆರಫಿಸ್ಟ್ ಈರಮ್ಮ ಹಾದಿಮನಿ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ ದೊಡಮನಿ, ಎಸ್.ಎಂ ಪಾಟೀಲ, ಡಾ.ಎಂ.ಆರ್ ಬಡಿಗೇರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!