ಕರ್ತವ್ಯಕ್ಕಾಗಿ ಮದುವೆ ಮುಂದೂಡಿದ ಡಿವೈಎಸ್ಪಿ

268

ಮಳವಳ್ಳಿ: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕಾಗಿ ಮದುವೆಯನ್ನೇ ಮುಂದೂಡಿದ್ದಾರೆ. ಈ ಮೂಲಕ ತಮ್ಗೆ ತಮ್ಮ ವೈಯಕ್ತಿಕ ಬದುಕಿಗಿಂತ ಸಾರ್ವಜನಿಕರ ಸೇವೆ ಮುಖ್ಯ ಎಂದು ಸಾರಿದ್ದಾರೆ.

ಮಳವಳ್ಳಿ ಡಿವೈಎಸ್ಪಿ ಎಂ.ಜೆ ಪೃಥ್ವಿ ಅವರು, ತಮ್ಮ ಮದ್ವೆಯನ್ನ ಮುಂದೂಡುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಮಳವಳ್ಳಿ ಕರೋನಾ ಹಾಟ್ ಸ್ಪಾಟ್ ಆಗಿದೆ. ಹೀಗಾಗಿ ಇದರಿಂದ ಮುಕ್ತಿ ನೀಡಬೇಕು ಎಂದು ಇದೇ ತಿಂಗಳು 5ರಂದ ಮದ್ವೆ ಮುಂದೂಡಿರುವ ವಿಷಯ ಇದೀಗ ತಿಳಿದು ಬಂದಿದೆ.

ಮದುವೆ ಮುಂದೂಡಿ ಕರ್ತವ್ಯ ಮಾಡ್ತಿರೋ ದಕ್ಷ ಅಧಿಕಾರಿಯ ಕಾರ್ಯಕ್ಕೆ ಸಂಸದೆ ಸುಮಲತಾ‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದ್ಕಡೆ ಮಗನ ಮದ್ವೆಗಾಗಿ ಕಾನೂನು ಉಲ್ಲಂಘಿಸೋ ಮಾಜಿ ಸಿಎಂ, ಮತ್ತೊಂದ್ಕಡೆ ಕರ್ತವ್ಯಕ್ಕಾಗಿ ಮದ್ವೆ ಮುಂದೂಡುವ ಅಧಿಕಾರಿ. ನಾವು ನಿಜವಾಗಿ ಯಾರನ್ನ ಫಾಲೋ ಮಾಡ್ಬೇಕು ಅನ್ನೋದು ತಿಳಿಯುತ್ತೆ.




Leave a Reply

Your email address will not be published. Required fields are marked *

error: Content is protected !!