ಡೆಡ್ಲಿ ಕರೋನಾ: ಗುಮ್ಮಟನಗರಿಯಲ್ಲಿ 2ನೇ ಬಲಿ

339

ವಿಜಯಪುರ: ಗುಮ್ಮಟನಗರಿಯಲ್ಲಿ ಕರೋನಾಗೆ ಎರಡನೇ ಬಲಿ ಆಗಿದೆ. P374 ಎಂಬ 42 ವರ್ಷದ ವ್ಯಕ್ತಿ ಏಪ್ರಿಲ್ 16ರಂದೇ ಹೃದಯಾಘಾತದಿಂದ ಸಾವನ್ನಪ್ಪಿದ್ದನ್ನ. ಇಂದು ಹೆಲ್ತ್ ಬುಲೆಟಿನ್ ರಿಪೋರ್ಟ್ ನಲ್ಲಿ ಕರೋನಾ ಪಾಸಿಟಿವ್ ಇರುವುದು ದೃಢವಾಗಿದೆ.

ಪಾಸಿಟಿವ್ ಬಂದಿರುವ P306, P308 ಜೊತೆಗೆ ಕಾರು ಚಾಲಕನಾಗಿ P374 ಬೆಂಗಳೂರಿಗೆ ಹೋಗಿ ಬಂದಿದ್ದರು. ಇನ್ನು ಅವರಿಬ್ಬರು ಕರೋನಾ ಸೋಂಕಿತರಾಗಿದ್ದಾರೆ ಅನ್ನೋ ವಿಷಯ ತಿಳಿದು ಹೃದಯಾಘಾತದಿಂದ ಅಸುಗಿದ್ದ. P306 ಎಂಬ 65ವರ್ಷದ ವ್ಯಕ್ತಿ ನಿವೃತ್ತ ಎಎಸ್ಐ ಮತ್ತು  P308 ಎಂಬ 37 ವರ್ಷದ ಪೊಲೀಸ್ ಪೇದೆಯ ಜೊತೆಗೆ ಸಂಪರ್ಕ ಹೊಂದಿದ್ದರು.

ಒಟ್ಟಿನಲ್ಲಿ ವಿಜಯಪುರದಲ್ಲಿ ಇಲ್ಲಿಯವರೆಗೆ ಒಟ್ಟಾರೆ 21 ಕರೋನಾ ಕೇಸ್ ನಲ್ಲಿ 2 ಸಾವನ್ನಪ್ಪರಿಂದ ಜನತೆಯಲ್ಲಿ ಆತಂಕ ಮನೆ ಮಾಡಿದೆ.




Leave a Reply

Your email address will not be published. Required fields are marked *

error: Content is protected !!