2 ತಿಂಗಳಲ್ಲಿ ಮಗು ಎತ್ತಿಕೊಳ್ಳಬೇಕಿದ್ದ ಪಿಎಸ್ಐ ಕರೋನಾಗೆ ಬಲಿ

506

ಪ್ರಜಾಸ್ತ್ರ ಸುದ್ದಿ

ಕೋಲಾರ: ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಆ ಮನೆಗೆ ಇನ್ನೆರಡು ತಿಂಗಳಲ್ಲಿ ಪುಟ್ಟ ಕಂದನ ಆಗಮನವಾಗ್ತಿತ್ತು. ಆದ್ರೆ, ವಿಧಿ ಆಟವೇ ಬೇರೆ ಇತ್ತು. ಹೀಗಾಗಿ ಗರ್ಭಿಣಿಯೊಬ್ಬರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಮತ್ಯಾರೂ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಪಿಎಸ್ಐ ಆಗಿ ಸೇವೆ ಸಲ್ಲಿಸ್ತಿದ್ದ ಶಾಮಿಲಿ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಿರುಪಾಕ್ಷ ಗ್ರಾಮದ ಶಾಮಿಲಿಗೆ ಕೇವಲ 24 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಿಎಸ್ಐ ಆಗಿದ್ರು. ಮಂಗಳೂರಿನ ಎಸ್ಪಿ ಕಚೇರಿಯಲ್ಲಿ ಪ್ರೊಬೆಷನರಿ ಕರ್ತವ್ಯ ನಿರ್ವಹಿಸ್ತಿದ್ರು. ಗರ್ಭಣಿಯಾಗಿದ್ದ ಶಾಮಿಲಿ ತವರಿಗೆ ಬಂದಿದ್ರು. 7 ತಿಂಗಳು ತುಂಬಿದ್ರಿಂದ ಲಸಿಕೆ ಪಡೆದಿರಲಿಲ್ಲ.

ಹೀಗಿರುವಾಗಿ ಮೇ 2ರಂದು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾಗಿದ್ದಾರೆ. ಇದೀಗ ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!