ಕಾರ್ಮಿಕರಣೆ ದಿನಾಚರಣೆ ನಿಮಿತ್ಯ ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋವನ್ನ ಅರ್ಪಣೆ ಮಾಡಲಾಗಿದೆ. ಈ ಮೂಲಕ ಡಿ ಬಾಸ್ ದರ್ಶನ, ಚಿತ್ರತಂಡ ಒಂದು ವಿಡಿಯೋ ಅರ್ಪಿಸಿದೆ.
ಈ ವಿಡಿಯೋ ಮೂಲಕ ಒಂದು ಸಿನಿಮಾ ರೆಡಿಯಾಗುವಾಗ ಸಿನಿ ಕಾರ್ಮಿಕರ ವರ್ಗ ಎಷ್ಟೊಂದು ಕಷ್ಟ ಪಡುತ್ತೆ ಅನ್ನೋದನ್ನ ತೋರಿಸಲಾಗಿದೆ. ಇನ್ನು ನಟ ದರ್ಶನ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
ಉಮಾಪತಿ ನಿರ್ಮಾಣದ ತರುಣ ಸುಧೀರ ನಿರ್ದೇಶನದ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಲಾಕ್ ಡೌನ್ ಇಲ್ಲದೆ ಹೋಗಿದ್ರೆ ಈಗಾಗ್ಲೇ ರಾಬರ್ಟ್ ಧೂಳೆಬ್ಬಿಸಬೇಕಾಗಿತ್ತು. ಆದ್ರೆ, ಕರೋನಾ ಲಾಕ್ ಡೌನ್ ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್ ನೀಡಿದೆ.