ಏಕಾಗ್ರತೆಗೆ ಯೋಗ ಸಹಕಾರಿ: ಮನ್ನೀಕೇರಿ

404

ಧಾರವಾಡ: ಶಹರದ ವಲಯದ ಯೋಗಾಸನ  ಕ್ರೀಡೆಯನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಜಾನನ ಮನ್ನಿಕೇರಿ ಅವರು ಉದ್ಘಾಟಣೆ ಮಾಡಿದ್ರು.

 ಉದ್ಘಾಟನೆ ಬಳಿಕ ಮಾತ್ನಾಡಿದ ಮನ್ನಿಕೇರಿ ಅವರು, ಇoದಿನ ಒತ್ತಡದ ಜೀವನದಲ್ಲಿ ಯೋಗ ಪ್ರತಿಯೊಬ್ಬರಿಗೂ ಅತಿ ಅವಶ್ಯವೆಂದು ಹೇಳಿದ್ರು.  ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಯೋಗವು ಮನಸ್ಸನ್ನ ನಿಯಂತ್ರಿಸಿಕೊಳ್ಳಲು,  ಏಕಾಗ್ರತೆ ಬೆಳೆಸಿ, ಒತ್ತಡ ನಿವಾರಣೆ ಮಾಡುತ್ತದೆ ಎಂದು ತಿಳಿಸಿದ್ರು.

ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ನಿರ್ಣಾಯಕರಾದ ಮಂಜುನಾಥ ಹೂಗಾರ, ಚಿಕ್ಕಳ್ಳಿ, ಪಟ್ಟಣದ, ಬೋಂಗಾಳೆ, ಸಿರಸಂಗಿ ಹಾಗೂ ಯೋಗ ಕ್ರೀಡೆಯನ್ನ ವ್ಯವಸ್ಥಿತವಾಗಿ ಆಯೋಜನೆ ಮಾಡಿದ ಬಾಸೆಲ್ ಮಿಷನ್ ಬಾಲಕಿಯರ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾದ ಎಲ್ ಎ ದೇವಧರ ಹಾಗೂ ಎಂ ಡಿ ಮುತ್ತಲಗಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಧಾರವಾಡ ಬಿಇಓ ಎ.ಎ ಖಾಜಿ ಸ್ವಾಗತಿಸಿದರು. ಎಸ್.ಎನ್ ಇದಿಯಮ್ಮನರ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ ಮುಗಳಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!