ಸ್ವಂತ ಬುದ್ದಿಯಿಲ್ದಿದ್ರೆ ಇವಳಂತೆ ಬೆತ್ತಲಾಗ್ತೀರಾ ಹುಷಾರ್!

833

ಮುಂಬೈ: ಕೆಲವೊಮ್ಮೆ ಹುಡ್ಗೀರು ಮಾಡಿಕೊಳ್ಳುವ ಯಡವಟ್ಟು ನೋಡಿದ್ರೆ ಏನ್ ಹೇಳಬೇಕೋ ಗೊತ್ತಾಗುವುದಿಲ್ಲ. ಯಾರು ಏನೇ ಹೇಳಿದ್ರೂ ಹಿಂದುಮುಂದು ನೋಡ್ದೇ ಅದನ್ನ ಮಾಡಲು ರೆಡಿ ಇರ್ತಾರೆ. ಬಳಿಕ ಅದರಿಂದ ಸಾಕಷ್ಟು ಅವಮಾನ, ಸಂಕಷ್ಟ ಎದುರಿಸ್ತಾರೆ. ಅದಕ್ಕೆ ಮುಂಬೈನ 23 ವರ್ಷದ ಯುವತಿ ಸಾಕ್ಷಿ.

19 ವರ್ಷದ ವಿದ್ಯಾರ್ಥಿ ಜಿತಿನ ತನುಷ್ಕನಿ ಅನ್ನೋ ಯುವಕ, ತನ್ಗಿಂತ ಮೂರ್ನಾಲ್ಕು ವರ್ಷ ಹಿರಿಯಳಾಗಿರುವ ಯುವತಿ ಜೊತೆ ಸ್ನೇಹ ಮಾಡಿದ್ದಾನೆ. ಇದು ತಪ್ಪಲ್ಲ. ಇಬ್ಬರ ನಡುವೆ ಫೋನ್ ಕಾಲ್, ಚಾಟಿಂಗ್, ಲೈವ್ ಸ್ಟ್ರೀಮ್ ಎಲ್ಲ ನಡೆದಿದೆ. ಹೀಗೆ ಒಮ್ಮೆ ಲೈವ್ ಸ್ಟ್ರೀಮ್ ಮಾಡುವಾಗ, ಯುವತಿಗೆ ಬಟ್ಟೆ ಬಿಚ್ಚಲು ಹೇಳಿದ್ದಾನೆ. ಆ ಪುಣ್ಯಾತಿಗಿತ್ತಿ ಲೈವ್ ನಲ್ಲಿ ಬಟ್ಟಿ ಬಿಚ್ಚಿದ್ದಾಳೆ. ಅದನ್ನ ಇವನು ರೆಕಾರ್ಡ್ ಮಾಡಿಕೊಂಡಿದ್ದಾನೆ.

ಹೀಗೆ ಯುವತಿಯ ನಗ್ನ ದೃಶ್ಯ ಸೆರೆ ಹಿಡಿದ ಜಿತಿನ ತನುಷ್ಕನಿ ಸ್ನೇಹಿತರಿಗೆ ಅದನ್ನ ಐದು ಸಾವಿರ ರೂಪಾಯಿಯಂತೆ ಮಾರಲು ನೋಡಿದ್ದಾನೆ. ಇದು ಹುಡ್ಗಿಗೆ ಸ್ನೇಹಿತರೊಬ್ಬರಿಂದ ತಿಳಿದಿದೆ. ಆಗ ವಿಚಾರಿಸಿದಾಗ 70 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಇದ್ರಿಂದ ಕಂಗಾಲಾದ ಯುವತಿ ಜಿತಿನ ಮೊಬೈಲ್ ನಂಬರ್, ಫೋಟೋ ಸಮೇತ ಆತನ ಮಾಹಿತಿಯನ್ನ ಪೊವೈ ಪೊಲೀಸ್ ಠಾಣೆಗೆ ನೀಡಿದ್ದಾಳೆ. ಇದೀಗ ಆ ಕಿರಾತಕ ಪೊಲೀಸರ ಅತಿಥಿಯಾಗಿದ್ದಾನೆ.

ಸಾಂದರ್ಭಿಕ ಚಿತ್ರ ಬಳಸಲಾಗಿದೆ




Leave a Reply

Your email address will not be published. Required fields are marked *

error: Content is protected !!