ಶೀಘ್ರದಲ್ಲಿ ಬೆಂಗಳೂರು-ಮೈಸೂರು 10 ಲೈನ್ ರೋಡ್

251

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರು ನಡುವೆ 10 ಲೈನ್ ಕಾರಿಡಾರ್ ರೋಡ್ ಕೆಲಸ ನಡೆಯುತ್ತಿದ್ದು 2022 ಅಕ್ಟೋಬರ್ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು 8,172 ಕೋಟಿ ವೆಚ್ಚದ ಕಾಮಗಾರಿ ಅತಿ ವೇಗವಾಗಿ ಮುಗಿಯಲಿದೆ. ಈ ಮೂಲಕ 3 ಗಂಟೆಗಳ ಪ್ರಯಾಣ 90 ನಿಮಿಷಕ್ಕೆ ಬರಲಿದೆ ಎಂದಿದ್ದಾರೆ. ಈ ಮೂಲಕ ನಿತ್ಯ ಓಡಾಟ ನಡೆಸುವವರಿಗೆ ಇದು ಸಾಕಷ್ಟು ಅನುಕೂಲವಾಗಲಿದೆ.




Leave a Reply

Your email address will not be published. Required fields are marked *

error: Content is protected !!