ಎಸ್ಎಸ್ಎಲ್ ಸಿ ಪರೀಕ್ಷೆ: ಸಿಂದಗಿಯಲ್ಲಿ ಶೇ.100ರಷ್ಟು ಫಲಿತಾಂಶ

257

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಿಂದಗಿ ತಾಲೂಕಿನಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. 6,236 ವಿದ್ಯಾರ್ಥಿಗಳು ಪರಿಕ್ಷೆ ಎದುರಿಸಿದ್ದರು. ಇದರಲ್ಲಿ 3,565 ಗಂಡು ಮಕ್ಕಳು ಹಾಗೂ 2,671 ಹೆಣ್ಣು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇವರೆಲ್ಲರೂ ಪಾಸ್ ಆಗಿದ್ದಾರೆ ಎಂದು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ದೇವಣಗಾಂವ ತಿಳಿಸಿದ್ದಾರೆ.

ದೇವರಹಿಪ್ಪರಗಿಯ ವಿಕಾಸ ಕುಲ್ಕರ್ಣಿ 625ಕ್ಕೆ 625 ಅಂಕ ಪಡೆದಿದ್ದಾನೆ. ಆಲಮೇಲದ ಐಶ್ವರ್ಯ ಮಹೀಂದ್ರಕರ್ 621, ಸಿಂದಗಿಯ ರಾಹುಲ್ ಕಡ್ಲಗೊಂಡ 619 ಹಾಗೂ ಪಲ್ಲವಿ ರಮೇಶ ತಳವಾರ 619 ಅಂಕ ಗಳಿಸುವ ಮೂಲಕ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!