3 ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆ

249

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆಯ ದಿನಾಂಕವನ್ನ ರಾಜ್ಯ ಚುನಾವಣೆ ಆಯೋಗ ಘೋಷಿಸಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದ್ದು, ಆಗಸ್ಟ್ 16ರಂದು ಅಧಿಸೂಚನೆಯನ್ನ ಜಿಲ್ಲಾಧಿಕಾರಿ ಹೊರಡಿಸಲಿದ್ದಾರೆ.

ಆಗಸ್ಟ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, ಆಗಸ್ಟ್ 24 ನಾಮಪತ್ರ ಪರಿಶೀಲನೆ, ಆಗಸ್ಟ್ 26 ನಾಮಪತ್ರ ಹಿಂದಕ್ಕೆ ಪಡೆಯುವ ದಿನಾಂಕವಾಗಿದೆ. ಸೆಪ್ಟಂಬರ್ 3ರಂದು ಚುನಾವಣೆ ನಡೆಯಲಿದೆ. ಸೆಪ್ಟೆಂಬರ್ 6ರಂದು ಫಲಿತಾಂಶ ಹೊರಬೀಳಲಿದೆ.

ಬೆಳಗಾವಿ 58 ವಾರ್ಡ್, ಹುಬ್ಬಳ್ಳಿ-ಧಾರವಾಡ 82 ವಾರ್ಡ್, ಕಲಬುರಗಿ 55 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ. ಈ ಮೂಲಕ ಈ ಮೂರು ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆಯ ಕಾವು ಜೋರಾಗಲಿದೆ.




Leave a Reply

Your email address will not be published. Required fields are marked *

error: Content is protected !!