ರಾಜ್ಯದ 20ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಈ ಬಾರಿ ಟಿಕೆಟ್ ಸಿಗಲ್ವಾ?

195

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಹೀಗಾಗಿ ಸಮಾವೇಶ, ರ್ಯಾಲಿಗಳನ್ನು ನಡೆಸುತ್ತಿವೆ. ಗುಜರಾತಿನಲ್ಲಿ ಗೆದ್ದು, ಹಿಮಾಚಲ ಪ್ರದೇಶದಲ್ಲಿ ಸೋಲು ಕಂಡಿರುವ ಬಿಜೆಪಿ, ರಾಜ್ಯದಲ್ಲಿ ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ಪ್ಲಾನ್ ನಡೆಸಿದೆಯಂತೆ.

ಗುಜರಾತಿನಲ್ಲಿ 40 ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡದೆ ಹೊಸಬರಿಗೆ ಅವಕಾಶ ನೀಡಿತು. ಈ 40 ನಾಯಕರಲ್ಲಿ ಅಮಿತ ಶಾ ಬಳಗದಲ್ಲಿ ಗುರಿತಿಸಿಕೊಂಡು 7 ನಾಯಕರಿದ್ದರು. ಇದೆ ರೀತಿ ಕರ್ನಾಟಕದಲ್ಲಿ ಹಿರಿಯ ತಲೆಗಳು, ಕಳಂಕ ಹೊತ್ತವರು, ಗೆಲ್ಲುವುದು ಕಷ್ಟ ಎಂದು ಹೇಳಲಾಗುತ್ತಿರುವವರು ಸೇರಿದಂತೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಈ ಬಾರಿ ಟಿಕೆಟ್ ತಪ್ಪುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ 6 ನೂರುಕ್ಕೂ ಹೆಚ್ಚು ಜನರು ಮೋದಿ, ಶಾ ಸೂಚನೆಯಂತೆ ಸರ್ವೇ ನಡೆಸಿದ್ದಾರಂತೆ. ಇವರು ಎದುರಾಳಿ ಎದುರು ಗೆಲ್ಲುವುದು ಅಸಾಧ್ಯ, ಸ್ವಲ್ಪ ಬೆಂಬಲ ನೀಡಿದರೆ ಗೆಲ್ಲುವವರು, ಏನೆ ಮಾಡಿದರೂ ಗೆಲ್ಲದೆ ಇರುವವರ ಪಟ್ಟಿಯನ್ನು ಇವರು ಮಾಡುತ್ತಿದ್ದಾರಂತೆ. ಹೀಗಾಗಿ 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೆ ಇರಲು ನಿರ್ಧರಿಸಿದೆ ಅನ್ನೋದು ಸಧ್ಯದ ಚರ್ಚೆ.




Leave a Reply

Your email address will not be published. Required fields are marked *

error: Content is protected !!