ಪಿಯುಸಿ ಫಲಿತಾಂಶ ಪ್ರಕಟ: ದ.ಕ ಫಸ್ಟ್, ಯಾದಗಿರಿ ಲಾಸ್ಟ್

108

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಪ್ರಥಮ ಹಾಗೂ ಯಾದಗಿರಿ ಕೊನೆಯ ಸ್ಥಾನ ಪಡೆದಿವೆ. ಕಳೆದ ವರ್ಷ 61.88 ಫಲಿತಾಂಶ ಬಂದಿತ್ತು. ಈ ವರ್ಷ ಶೇಕಡ 74.64ರಷ್ಟು ಫಲಿತಾಂಶ ಬಂದಿದೆ.

ದಕ್ಷಿಣ ಕನ್ನಡ ಶೇಕಡ 95.33ರಷ್ಟು ಫಲಿತಾಂಶ ಬಂದಿದ್ದು ಪ್ರಥಮ ಸ್ಥಾನ ಪಡೆದಿದೆ. ಶೇಕಡ 62.98 ಫಲಿತಾಂಶ ಪಡೆದ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. 7 ಲಕ್ಷದ 2 ಸಾವಿರದ 67 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 5 ಲಕ್ಷ 24 ಸಾವಿರದ 209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಶೇಕಡ 61.22, ವಾಣಿಜ್ಯ ವಿಭಾಗದಲ್ಲಿ ಶೇಕಡ 75.89 ಹಾಗೂ ವಿಜ್ಞಾನ ವಿಭಾಗದಲ್ಲಿ 85.71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!