ಈ ಸ್ಟಾರ್ ಗಳ ಟ್ವಿಟ್ಟರ್ ಬ್ಲೂ ಟಿಕ್ ಮಾಯ

122

ಪ್ರಜಾಸ್ತ್ರ ಸುದ್ದಿ

ಟ್ವಿಟ್ಟರ್ ಬಳಕೆದಾರರಿಗೆ ಒಂದಾದ ಮೇಲೆ ಒಂದರಂತೆ ಎಲನ್ ಮಸ್ಕ್ ಶಾಕ್ ಕೊಡುತ್ತಿದ್ದಾರೆ. ಟ್ವಿಟ್ಟರ್ ಸಂಸ್ಥೆ ಖರೀದಿಸಿದ ಬಳಿಕ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ. ವಿಐಪಿ ಖಾತೆಗಳನ್ನು ಪರಿಶೀಲಿಸುವ ದೃಷ್ಟಿಯಿಂದ ಬ್ಲೂ ಟಿಕೆ ನೀಡಲಾಗಿತ್ತು. ಎಲನ್ ಮಸ್ಕ್ ನಂತರ ಅದನ್ನು ಮೂರು ಹಂತದ ಕಲರ್ ಮಾಡಿದರು.

ವಿಐಪಿಗಳು ಬ್ಲೂ ಟಿಕ್ ಉಳಿಸಿಕೊಳ್ಳಲು ಪ್ರತಿ ತಿಂಗಳು 900 ರೂಪಾಯಿ, ವಾರ್ಷಿಕ 9,400 ರೂಪಾಯಿ ಕೊಡಬೇಕು ಎಂದು ಹೇಳಲಾಯಿತು. ಹೀಗಾಗಿ ಅನೇಕರು ಸಬ್ ಸ್ಕ್ರೈಬ್ ಮಾಡಿಕೊಂಡರು. ಇದೀಗ ಸಿನಿಮಾ, ಕ್ರಿಕೆಟ್ ರಾಜಕೀಯ ಕ್ಷೇತ್ರದ ಗಣ್ಯರ ಬ್ಲೂ ಟಿಕ್ ಮಾಯವಾಗಿದೆ.

ನಟರಾದ ಅಮಿತಾಬ್ ಬಚ್ಚನ್, ದರ್ಶನ್, ಯಶ್, ಪವನ್ ಕಲ್ಯಾಣ್, ಸಲ್ಮಾನ್ ಖಾನ್, ಶಾರೂಖ್ ಖಾನ್, ನಟಿಯರಾದ ಸಮಂತಾ, ಆಲಿಯಾ ಭಟ್, ಕ್ರಿಕೆಟಿಗರಾದ ಕೊಹ್ಲಿ, ರೋಹಿತ್ ಶರ್ಮಾ, ರಾಜಕಾರಣಿಗಳಾದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೀಗೆ ಅನೇಕ ದಿಗ್ಗಜರ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯವಾಗಿದೆ.




Leave a Reply

Your email address will not be published. Required fields are marked *

error: Content is protected !!