ದ್ವಿತೀಯ ಪಿಯುಸಿ ಫಲಿತಾಂಶ: ವಿಜಯಪುರ 3ನೇ ಸ್ಥಾನ

114

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ದ್ವಿತೀಯ ಹಾಗೂ ವಿಜಯಪುರ 3ನೇ ಸ್ಥಾನ ಪಡೆದಿದೆ.

ಒಟ್ಟಾರೆಯಾಗಿ ಶೇಕಡ 94.89ರಷ್ಟು ಫಲಿತಾಂಶ ಮಾಡಿರುವ ಗುಮ್ಮಟನಗರಿ ಜಿಲ್ಲೆಯ ರಾಜ್ಯದಲ್ಲಿಯೇ 3ನೇ ಸ್ಥಾನ ಪಡೆದಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಬಿಸಿಲ ನಾಡು, ಹಿಂದುಳಿದ ಜಿಲ್ಲೆಯಲ್ಲಿಯೂ ಶಿಕ್ಷಣ ಕ್ರಾಂತಿಯಾಗುತ್ತಿದೆ.

ಶೇಕಡ 97.37ರಷ್ಟು ಫಲಿತಾಂಶ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಶೇ.96.80ರಷ್ಟು ಫಲಿತಾಂಶದ ಮೂಲಕ ಉಡುಪಿ ದ್ವಿತೀಯ ಸ್ಥಾನ ಪಡೆದಿದೆ. ಶೇ.72.86ರಷ್ಟು ಫಲಿತಾಂಶದೊಂದಿಗೆ ಗದಗ ಕೊನೆಯ ಸ್ಥಾನದಲ್ಲಿದೆ. ಒಟ್ಟು 6 ಲಕ್ಷದ 81 ಸಾವಿರದ 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5 ಲಕ್ಷದ 52 ಸಾವಿರದ 690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!