ಪರೋಕ್ಷವಾಗಿ ಚೀನಾಗೆ ತಿರುಗೇಟು ನೀಡಿದ ರಾಷ್ಟ್ರಪತಿ

298

ಪ್ರಜಾಸ್ತ್ರ ಸುದ್ದಿ

ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮೊದಲು ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಾತ್ನಾಡಿದ್ದಾರೆ. ಭಾರತ ಶಾಂತಿಯಲ್ಲಿ ನಂಬಿಕೆ ಇಟ್ಟಿದೆ. ಇದರ ಜೊತೆಗೆ ಆಕ್ರಮಣಕಾರಿ ಪ್ರಯತ್ನಗಳಿಗೆ ಸರಿಯಾದ ತಿರುಗೇಟು ನೀಡುವ ಶಕ್ತಿಯನ್ನ ಸಹ ಹೊಂದಿದೆ ಎಂದು ಹೇಳುವ ಮೂಲಕ ಚೀನಾಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಮಾನವ ಸಮುದಾಯ, ಇಡೀ ವಿಶ್ವ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ತೊಡಗಿರುವಾಗ ನಮ್ಮ ನೆರೆ ಹೊರೆಯವರು ಭೂ ವಿಸ್ತರಣೆಗೆ ನಿಂತಿರುವುದು ದುರದುಷ್ಟಕರ ಎಂದು ಚೀನಾ ಹೆಸರು ಪ್ರಸ್ತಾಪಿಸದೆ ಕುಟುಕಿದ್ದಾರೆ. ಇದೆ ವೇಳೆ ದೇಶದ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ವಂದಿಸಿದ್ರು. ಇಡೀ ರಾಷ್ಟ್ರವು ಗ್ವಾಲನ್ ಕಣಿವೆಯ ಹುತಾತ್ಮರಿಗೆ ಕೃತಜ್ಞರಾಗಿರುತ್ತಾರೆ ಎಂದರು.

ಗಾಂಧೀಜಿ ನಮ್ಮ ಸ್ವತಂತ್ರ ಚಳವಳಿಯ ಮಾರ್ಗದರ್ಶಕರಾಗಿದ್ದು, ನಮ್ಮ ಅದೃಷ್ಟ. ಸಮಾನತೆ, ನ್ಯಾಯಕ್ಕಾಗಿ ಹೋರಾಟ ಮಾಡುವ ಗಣತಂತ್ರವಾಗಿದೆ. ಗಾಂಧೀಜಿಯನ್ನ ಪುನಃ ಓದಿಕೊಳ್ಳುವುದು, ತಿಳಿದುಕೊಳ್ಳುವುದು ನೋಡಿ ಖುಷಿಯಾಗುತ್ತೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. ಪ್ರತಿ ವರ್ಷ ಸ್ವತಂತ್ರ ದಿನಾಚರಣೆಗೆ ಒಂದು ದಿನ ಮೊದಲು ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ಅವರು ಭಾಷಣ ಮಾಡುವುದು ವಾಡಿಕೆಯಾಗಿದೆ.




Leave a Reply

Your email address will not be published. Required fields are marked *

error: Content is protected !!