ವಿಶ್ವದ ಸಮೃದ್ಧ ರಾಷ್ಟ್ರಗಳಲ್ಲಿ ಡಿಜಿಟಲ್ ಇಂಡಿಯಾ: ಪಿಎಂ ಮೋದಿ

235

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇಡೀ ದೇಶದ ತುಂಬಾ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಎಲ್ಲಡೆ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮಿಸಲಾಗುತ್ತಿದೆ. ಇದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡುವ ಮೂಲಕ ದೇಶದ ಜನತೆಗೆ ಶುಭ ಕೋರಿದರು.

10ನೇ ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಕಾಂಗ್ರೆಸೇತರ ಪ್ರಧಾನಿ ಎನ್ನುವ ಹೆಗ್ಗಳಿಕೆ ಪಡೆದರು. ಈ ವೇಳೆ ಮಾತನಾಡಿದ ಪ್ರಧಾನಿ, ಈ ವೇಳೆ ದೇಶದ ತುಂಬಾ ರಾಷ್ಟ್ರಭಕ್ತಿ ಮೊಳಗುತ್ತಿದೆ. ಭಾರತ ವಿಶ್ವದ ನಂಬರ್ ಲೋಕತಂತ್ರ ದೇಶವಾಗಿದೆ. ಇದಕ್ಕಾಗಿ ಅನೇಕರ ತ್ಯಾಗ ಬಲಿದಾನವಿದೆ. ಇಂದು ವಿಶ್ವದ ಸಮೃದ್ಧ ರಾಷ್ಟ್ರಗಳಲ್ಲಿ ಡಿಜಿಟಲ್ ಭಾರತವಿದೆ ಎಂದರು.

ಶಿಕ್ಷಣದ ಮೂಲಕ ಭಾರತ ಆಧುನಿಕತೆಯತ್ತ ಸಾಗುತ್ತಿದೆ. ಕರೋನಾ ಬಳಿಕ ಇಡೀ ವಿಶ್ವವೇ ಭಾರತವನ್ನು ಗೌರವಿಸುತ್ತದೆ. ಇದರೊಂದಿಗೆ ಆಮದು ವೇಗ ಪಡೆದುಕೊಂಡಿದೆ. ಜಿ.20 ಯೋಜನೆಯ ಮೂಲಕ ಸಾಮರ್ಥ್ಯ ಗೊತ್ತಾಗಿದೆ. ಭಾರತವು ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು. ಇಂದು 5ನೇ ಸ್ಥಾನದಲ್ಲಿದೆ. ಮುಂದಿನ ಸಾರಿ 3ನೇ ಸ್ಥಾನಕ್ಕೆ ತರುತ್ತೇವೆ ಎಂದು ಹೇಳಿದರು.




Leave a Reply

Your email address will not be published. Required fields are marked *

error: Content is protected !!