ಭಾರತದಲ್ಲಿ ಟಿ-20 ವಿಶ್ವಕಪ್: ಪಾಕ್ ಆಟಗಾರರಿಗೆ ವೀಸಾ ಭರವಸೆ

228

ಪ್ರಜಾಸ್ತ್ರ ಕ್ರೀಡಾಸುದ್ದಿ

ನವದೆಹಲಿ: ಟಿ-20 7ನೇ ಆವೃತ್ತಿಯ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಅಕ್ಟೋಬರ್ ನಲ್ಲಿ ಶುರುವಾಗುವ ಟಿ-20 ವರ್ಲ್ಡ್ ಕಪ್ ಗೆ ಪಾಕ್ ಆಟಗಾರರು ಬರಲು ವೀಸಾ ನೀಡುವ ಭರವಸೆಯನ್ನ ಬಿಸಿಸಿಐ ಕಾರ್ಯದರ್ಶಿ ಜಯ ಶಾ, ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಗೆ ತಿಳಿಸಿದ್ದಾರೆ.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದ್ರಾಬಾದ್, ಕೊಲ್ಕೊತ್ತಾ, ಲಖನೌ ಹಾಗೂ ಧರ್ಮಶಾಲಾ ಸೇರಿದಂತೆ ದೇಶದ 9 ಕಡೆ ಪಂದ್ಯಗಳು ನಡೆಯಲಿವೆ ಎಂದಿದ್ದಾರೆ. ಟಿ-20 ವಿಶ್ವಕಪ್ ಗೆ ಸಂಬಂಧಿಸಿದಂತೆ ವೀಸಾ ನೀಡುವ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಸ್ಪಷ್ಟನೆ ಕೇಳಿತ್ತು.

ಇನ್ನು ಭಾರತ ಹಾಗೂ ಪಾಕಿಸ್ಥಾನದ ನಡುವಿನ ರಾಜತಾಂತ್ರಿಕ ಸಂಬಂಧ ಸರಿಯಿಲ್ಲ. ಹೀಗಾಗಿ ಕಳೆದ 10 ವರ್ಷಗಳಿಂದ ಉಭಯ ತಂಡಗಳ ನಡುವೆ ಕ್ರಿಕೆಟ್ ಸರಣಿ ನಡೆದಿಲ್ಲ. ಹೀಗಾಗಿ ಭಾರತದಲ್ಲಿ ನಡೆಯುವ ವಿಶ್ವಕಪ್ ಗೆ ವೀಸಾ ಸಿಗುತ್ತಾ ಅನ್ನೋ ಚಿಂತೆಯಲ್ಲಿದ್ದು, ಸಧ್ಯಕ್ಕೆ ಸಿಗುವ ಭರವಸೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!