ಪ್ರಜಾಸ್ತ್ರ ಸುದ್ದಿ
ಬೀದರ: ಟಾಟಾ ಸುಮೋ ವಾಹನದಲ್ಲಿ ಸುಮಾರು 1 ಕೋಟಿ ಮೌಲ್ಯದ 100 ಕೆಜಿ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವನ್ನು ರಾಷ್ಟ್ರೀಯ ಹೆದ್ದಾರಿ ನಿಂಬೂರ ಕ್ರಾಸ್ ಹತ್ತಿರ ವಶಕ್ಕೆ ಪಡೆಯಲಾಗಿದೆ. ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದ್ದಾರೆ.
ಜಹೀರಾಬಾದ್ ಕಡೆಯಿಂದ ಮಹಾರಾಷ್ಟ್ರಾಕ್ಕೆ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಪೊಲೀಸರು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ, ಸುಮಾರು 1 ಕೋಟಿ 38 ಸಾವಿರದ 500 ರೂಪಾಯಿ ಮೌಲ್ಯದ 2 ಕೆಜಿ ತೂಕದ 50 ಪ್ಯಾಕೆಟ್ ಗಳನ್ನು(100 ಕೆಜಿ), 4 ಮೊಬೈಲ್, ಟಾಟಾ ಸುಮೋ ವಾಹನ ಹಾಗೂ 800 ರೂಪಾಯಿ ವಶಪಡಿಸಕೊಳ್ಳಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.