ಕ್ರಿಕೆಟ್ ಅಂಗಳಕ್ಕೆ ಮಿ.360 ಗುಡ್ ಬೈ

471

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜೋಹಾನ್ಸ್ ಬರ್ಗ್: ಸೌಥ್ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸಮನ್, ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಸ್ಟೈಲಿಸ್ ಪ್ಲೇಯರ್ ಇಂದು ನಿವೃತ್ತಿ ಘೋಷಿಸಿದ್ದಾರೆ.

ಎಬಿಡಿ ನಿವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೂ ಪರಿಣಾಮ ಬೀರಲಿದೆ. ಸ್ಟೈಲಿಸ್ ಆಟಗಾರನ ನಿವೃತ್ತಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. 17 ವರ್ಷದ ಕ್ರಿಕೆಟ್ ಬದುಕಿನಲ್ಲಿ 114 ಟೆಸ್ಟ್, 228 ಏಕ ದಿನ ಪಂದ್ಯ ಹಾಗೂ 78 ಟಿ-20 ಪಂದ್ಯಗಳನ್ನು ಆಡಿದ್ದಾರೆ.

114 ಟೆಸ್ಟ್ ಪಂದ್ಯಗಳಲ್ಲಿ 8,765 ರನ್ ಗಳಿಸಿದ್ದು, ಇದರಲ್ಲಿ 22 ಶತಕಗಳಿವೆ. 278 ಅತ್ಯಧಿಕ ಸ್ಕೋರ್ ಆಗಿದೆ. ಇನ್ನು 228 ಏಕದಿನ ಪಂದ್ಯಗಳಲ್ಲಿ 9,577 ರನ್ ಗಳಿಸಿದ್ದಾರೆ. 25 ಶತಕಗಳಿವೆ. 176 ಬೆಸ್ಟ್ ಸ್ಕೋರ್ ಆಗಿದೆ. 78 ಟಿ-20 ಪಂದ್ಯಗಳಲ್ಲಿ 1,672 ರನ್ ಗಳಿಸಿದ್ದಾರೆ. ಇನ್ನು 2011ರಿಂದ 21ರ ತನಕ 11 ಸರಣಿಯಲ್ಲಿ ಆರ್ ಸಿಬಿ ತಂಡದಲ್ಲಿ ಆಟವಾಡಿದ್ದಾರೆ. 4,491 ರನ್ ಗಳಿಸಿದ್ದಾರೆ. ಬೆಂಗಳೂರು ತಂಡದಲ್ಲಿ ಆಡುವ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡರು. ಅಲ್ದೇ ಭಾವನಾತ್ಮಕ ಸಂಬಂಧ ಸಹ ಬೆಳೆಸಿಕೊಂಡರು. ಹಿಂದಿಯಲ್ಲಿ ಧನ್ಯವಾದಗಳು ಹೇಳುವ ಮೂಲಕ ಭಾರತೀಯರ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!