ಈ ನಾಲ್ವರಲ್ಲಿ ಯಾರು ಆರ್ ಸಿಬಿ ಸಾರಥಿ?

538

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ವಿರಾಟ್ ಕೊಹ್ಲಿ ಕಳೆದ 11 ವರ್ಷಗಳಿಂದ ಆರ್ ಸಿಬಿ ತಂಡದ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಆರ್ ಸಿಬಿ ಅಭಿಮಾನಿಗಳು 14 ವರ್ಷಗಳಿಂದ ಕಾಯುತ್ತಿರುವ ಚಾಂಪಿಯನ್ಸ್ ಪಟ್ಟ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದು, ನಾಯಕನ ಸ್ಥಾನದಿಂದ ಈಗಾಗ್ಲೇ ಹಿಂದಕ್ಕೆ ಸರಿದಿದ್ದಾರೆ.

ಈಗ ಆರ್ ಸಿಬಿ ತಂಡದ ನಾಯಕತ್ವ ಯಾರಿಗೆ ಕೊಡಬೇಕು ಅನ್ನೋ ಚರ್ಚೆ ನಡುವೆ ನಾಲ್ವರ ಹೆಸರು ಕೇಳಿ ಬಂದಿವೆ. ಎಬಿಡಿ ವಿಲಿಯರ್ಸ್, ಗ್ಲೇನ್ ಮ್ಯಾಕ್ಸ್ ವೆಲ್, ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ದೆಹಲಿಯ ಶ್ರೇಯಸ್ ಅಯ್ಯರ್. ಈ ನಾಲ್ಕು ಜನ ಆಟಗಾರರು ಹೆಸರು ಸಧ್ಯೆ ಚರ್ಚೆಯಲ್ಲಿದೆ.

ಎಬಿಡಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. 2021ರ ಐಪಿಎಲ್ ನಲ್ಲಿ ಆರ್ ಸಿಬಿ ಸೇರಿದ ಮ್ಯಾಕ್ಸವೆಲ್ ಭರ್ಜರಿ ಆಟವಾಡಿದ್ದಾರೆ. ಇನ್ನು ಪಂಜಾಬ್ ತಂಡದ ಕ್ಯಾಪ್ಟನ್ ಕೆ.ಎಲ್ ರಾಹುಲ್ ಹಾಗೂ ಡೆಲ್ಲಿ ತಂಡದ ಹಿಂದಿನ ನಾಯಕ ಶ್ರೇಯಸ್ ಅಯ್ಯರ್ ಆರ್ ಸಿಬಿ ಪರ ಆಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇವರು ಹೆಸರು ಹರಾಜು ಪ್ರಕ್ರಿಯೆಗೆ ಬರುತ್ತಿದೆಯಂತೆ. ಒಟ್ಟಿನಲ್ಲಿ ಕೊಹ್ಲಿ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!