ಟಿಪ್ಪರ್-ಬೈಕ್ ನಡುವೆ ಅಪಘಾತ: ಇಬ್ಬರ ಸಾವು

427

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಹೊಸಪೇಟೆ ನಗರದ ಅನಂತಶಯನ ಗುಡಿ ಹತ್ತಿರ ನಡೆದಿದೆ. 34 ವರ್ಷದ ರಾಜು ಹಾಗೂ 24 ವರ್ಷದ ರಂಜಿತಾ ಸಾವನ್ನಪ್ಪಿದ್ದಾರೆ.

ಇಂದು ಬೆಳಗ್ಗೆ ಹಂಪಿಯಿಂದ ಹೊಸಪೇಟೆಗೆ ಬೈಕ್ ನಲ್ಲಿ ಬರುತ್ತಿದ್ದಾಗ, ಎದುರಿಗೆ ಬರುತ್ತಿದ್ದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಆಗ ಸ್ಥಳದಲ್ಲಿಯೇ ಕೂಡ್ಲಗಿಯ ರಾಜು, ಕಾರಿಗನೂರಿನ ರಂಜಿತಾ ಮೃತಪಟ್ಟಿದ್ದಾರೆ. ಈ ಸಂಬಂಧ ಹೊಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!