ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಮಲತಾ

222

ನಟ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು 64ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಇಂದು ಅವರ ಹುಟ್ಟುಹಬ್ಬಕ್ಕೆ ಸಿನಿ ದುನಿಯಾದ ಸ್ಟಾರ್ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ರಾಜಕೀಯ ಗಣ್ಯರು ಶುಭ ಕೋರುತ್ತಿದ್ದಾರೆ.

ಇನ್ನು ನಟಿ, ಸಂಸದೆ ಸುಮಲತಾ ಅಂಬರೀಶ ಅವರು ಸಹ ಚಿರಂಜೀವಿ ಅವರಿಗೆ ಶುಭ ಕೋರಿದ್ದಾರೆ. ಟ್ವೀಟರ್ ಮೂಲಕ ಶುಭ ಕೋರಿರುವ ಅವರು ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಅಂಬರೀಶ ಕುಟುಂಬದ ಆತ್ಮೀಯರಲ್ಲಿ ಚಿರಂಜೀವಿ ಸಹ ಒಬ್ಬರಾಗಿದ್ದಾರೆ.

ಚಿರಂಜೀವಿ ಮತ್ತು ಸಮಲತಾ ಅವರು ತೆಲುಗಿನಲ್ಲಿ ಗ್ಯಾಂಗ್ ಲೀಡರ್, ಖೈದಿ, ಸ್ವಯಂ ಕೃಷಿ, ಅಗ್ನಿ ಗುಂಡಮ್ ಸೇರಿದಂತೆ ಅನೇಕ ಹಿಟ್ ಸಿನ್ಮಾಗಳನ್ನ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!