ಗೋಲ್ಡನ್ ಸ್ಟಾರ್ ಹುಟ್ಟು ಹಬ್ಬಕ್ಕೆ 3 ಚಿತ್ರಗಳ ಟೀಸರ್

334

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ನಟ ಗೋಲ್ಡನ್ ಸ್ಟಾರ್ ಗಣೇಶಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟ ಗಣೇಶ, ಈ ವರ್ಷ ಅದ್ಧೂರಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಕರೋನಾ ಲಾಕ್ ಡೌನ್ ಜೊತೆಗೆ ಚಿತ್ರರಂಗದ ಹಲವರು ಅಕಾಲಿಕ ನಿಧನ ಹೊಂದಿದ್ದು, ಈ ದುಃಖದ ಸಂದರ್ಭದಲ್ಲಿ ಸಂಭ್ರಮ ಬೇಡ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇನ್ನು ನಟ, ನಟಿಯರ ಹುಟ್ಟು ಹಬ್ಬದಂದು ಅವರ ಚಿತ್ರದ ಬಗ್ಗೆ ಹೇಳುವುದು, ಪೋಸ್ಟರ್, ಟೀಸರ್, ಟ್ರೇಲರ್, ಸಾಂಗ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಲಾಗುತ್ತೆ. ಅದೆ ರೀತಿ ಇಂದು ಗಣೇಶ ಹುಟ್ಟು ಹಬ್ಬಕ್ಕೆ ಗಾಳಿಪಟ-2 ಚಿತ್ರದ ಟೀಸರ್, ಸಖತ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಇನ್ನು ತ್ರಿಬಲ್ ರೈಡಿಂಗ್ ಚಿತ್ರದ ಟೀಸರ್ ರಿಲೀಸ್ ಗೂ ಪ್ಲಾನ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!