ಪವರ್ ಸ್ಟಾರ್ ಹೊಸ ಚಿತ್ರದ ಮೋಷನ್ ಪೋಸ್ಟರ್

272

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಅಭಿನಯದ ಹೊಸ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ದ್ವಿತ್ವ ಅನ್ನೋ ಚಿತ್ರದಲ್ಲಿ ನಟ ಪುನೀತರಾಜಕುಮಾರ ನಟಿಸ್ತಿದ್ದು, ಟೈಟಲ್ ಕೇಳಿದ ಅಭಿಮಾನಿಗಳಿಗೂ ಏನಿದರ ಅರ್ಥ? ಕಥೆ ಏನಿರಬಹುದು ಅನ್ನೋ ಕುತೂಹಲ ಮೂಡಿದೆ.

ಪವನ ಕುಮಾರ ಇದನ್ನ ನಿರ್ದೇಶನ ಮಾಡ್ತಿದ್ದಾರೆ. ಹೊಂಬಾಳೆ ಫಿಲ್ಮಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರ್ತಿದೆ. ವಿಜಯ ಕಿರಗಂದುರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ಪವನ ಕುಮಾರ, ದ್ವಿತ್ವ ಅಂದ್ರೆ ಇಬ್ಬರು ಅನ್ನೋದು ಆಗಿದೆ. ಈ ಸ್ಟೋರಿ ಲೈನ್ ತುಂಬಾ ವರ್ಷಗಳಿಂದ ನನ್ನಲ್ಲಿ ಬೆಳೆಯುತಿತ್ತು. ಇದೀಗ ಸಿನಿಮಾ ಆಗ್ತಿದೆ. ಎಂದಿದ್ದಾರೆ. ಸೆಪ್ಟೆಂಬರ್ ನಲ್ಲಿ ಶೂಟಿಂಗ್ ಶುರು ಎಂದಿದ್ದು, ಒಳ್ಳೆಯ ರೆಸ್ಪಾನ್ಸ್ ಬರ್ತಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!