ಬ್ರೇಕಿಂಗ್ ನ್ಯೂಸ್: ಬಾಲಿವುಡ್ ‘ಶೌಕತ್’ ಇನ್ನು ನೆನಪು ಮಾತ್ರ

458

ಬಾಲಿವುಡ್ ಅಂಗಳ ಸೇರಿದಂತೆ ಇಂಡಿಯನ್ ಸಿನಿ ದುನಿಯಾದ ಅದ್ಭುತ ನಟ ಇರ್ಫಾನ್ ಖಾನ್ ನಿಧನರಾಗಿದ್ದಾರೆ. 54 ವರ್ಷದ ನಟ ಮುಂಬೈನ ಧೀರುಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ರು.

2018ರಲ್ಲಿ ಲಂಡನ್ ನಲ್ಲಿ ಟ್ಯೂಮರ್ ಗೆ ಚಿಕಿತ್ಸೆ ಪಡೆದು ವಾಪಸ್ ಆಗಿದ್ರು. ಅವರ ಅಂಗೇಜ್ ಮೀಡಿಯಂ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇಂಥಾ ನಟ ಇದೀಗ ಇಲ್ಲ ಅನ್ನೋದು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್ ಆಗಿದೆ.

ಕೆಲ ದಿನಗಳ ಹಿಂದೆ ಇವರ ತಾಯಿ ತೀರಿಕೊಂಡಿದ್ರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಿರ್ಲಿಲ್ಲ. ಇದೀಗ ಅವರು ಸಹ ತಾಯಿ ಹಿಂದೆ ಹೊರಟು ಹೋಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!