ಹೆಲ್ತ್ ಬುಲೆಟಿನ್: ರಾಜ್ಯದಲ್ಲಿ ಮತ್ತೆ 9 ಪ್ರಕರಣಗಳು

328

ಬೆಂಗಳೂರು: ಮುಂಜಾನೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಮತ್ತೆ 9 ಪ್ರಕರಣಗಳು ದಾಖಲಾಗಿವೆ. ಅಲ್ದೇ, ಕಲಬುರಗಿಯಲ್ಲಿಯೇ ಬರೋಬ್ಬರಿ 8 ಕೇಸ್ ಪತ್ತೆಯಾಗಿದ್ದು ಬಿಸಿಲನಾಡಿನಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದೆ. ಇನ್ನೊಂದು ಪ್ರಕರಣ ಬೆಳಗಾವಿಯ ಹುಕ್ಕೇರಿಯಲ್ಲಿ ದಾಖಲಾಗಿದೆ.

ಇವತ್ತಿನ 9 ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು 532 ಕರೋನಾ ಸೋಂಕಿತರ ಸಂಖ್ಯೆಯಾಗಿದೆ. ಇದರಲ್ಲಿ 20 ಜನ ಸಾವನ್ನಪ್ಪಿದ್ದು, 215 ಜನ ಡಿಸ್ಚಾರ್ಜ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!