ನಾನಿಯ ದಸರಾ ಚಿತ್ರದ ವಿರುದ್ಧ ಪ್ರತಿಭಟನೆ

159

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತೆಲುಗು ನಟ ನಾನಿ ನಟನೆಯ ದಸರಾ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಇಷ್ಟು ವರ್ಷ ಲವರ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಾನಿ, ಈ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಅಬ್ಬರಿಸಿದ್ದು ನೋಡುಗರನ್ನು ಸೆಳೆಯುತ್ತಿದೆ. ಮೊದಲ ದಿನವೇ 38 ಕೋಟಿ ಗಳಿಸಿದೆ ಎಂದು ಹೇಳಲಾಗಿದೆ. ವಾರಂತ್ಯದಲ್ಲಿ ಇನ್ನಷ್ಟು ಗಳಿಸುವ ಸೂಚನೆ ಸಿಕ್ಕಿದೆ. ಇದರ ನಡುವೆ ದಸರಾ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.

ಚಿತ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಕಳ್ಳರಂತೆ ಬಿಂಬಿಸಲಾಗಿದೆ. ಇದರಿಂದ ನಮ್ಮ ಭಾವನೆಗಳಿಗೆ ನೋವು ಮಾಡಲಾಗಿದೆ ಎಂದು ಹೇಳಿ, ಆದಿಲ್ ಬಾದ್ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಚಿತ್ರದ ನಿರ್ದೇಶಕ, ನಿರ್ಮಾಪಕ, ನಟ ನಮ್ಮ ಕಷ್ಟಗಳನ್ನು ಅನುಭವಿಸದೆ, ನಮ್ಮ ವೃತ್ತಿಯ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!