ಸೂಪರ್ ಓವರ್ ಟೈಯಾದ್ರೂ ಆಂಗ್ಲರಿಗೆ ವಿಶ್ವಕಪ್.. ಕ್ರಿಕೆಟ್ ಪ್ರೇಮಿಗಳಿಗೆ ಬೇಸರ..

426

ಲಾರ್ಡ್ಸ್: 2019ರ ವರ್ಲ್ಡ್ ಕಪ್ ಫೈನಲ್ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿ, ಎಲ್ಲರಿಗೂ ಎರಡು ಬಾರಿ ಹೈಟೆನ್ಷನ್ ನೀಡಿತ್ತು. ಆದ್ರೆ, ಕೊನೆಗೆ ಗೆಲುವಿನ ಅದೃಷ್ಟ ಒಲಿದಿದ್ದು ಇಂಗ್ಲೆಂಡ್ ಗೆ. ಹೀಗಾಗಿ 2019ರ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ, ಕ್ರಿಕೆಟ್ ಗುರು ಮೊದಲ ಬಾರಿಗೆ ವರ್ಲ್ಡ್ ಚಾಂಪಿಯನ್ ಆಗಿದ್ದಾನೆ.

Image result for england and new zealand world cup 2019

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 241ರನ್ ಗಳನ್ನ ಗಳಿಸಿತ್ತು. ಈ ಮೊತ್ತು ಬೆನ್ನುಹತ್ತಿದ ಇಂಗ್ಲೆಂಡ್ ಸಹ 241 ರನ್ ಗಳಿಗೆ ಆಲೌಟ್ ಆಯ್ತು. ಸ್ಕೋರ್ ಸಮವಾಗಿರೋದ್ರಿಂದ ಸೂಪರ್ ಓವರ್ ಆಡಿಸಲಾಯ್ತು.

ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿತು. ನಂತರ ಆಡಿದ ನ್ಯೂಜಿಲೆಂಡ್ ಸಹ 15ರನ್ ಗಳಿಸಿತು. ಕ್ರಿಕ್ರೆಟ್ ಇತಿಹಾಸದಲ್ಲಿಯೇ ಇಷ್ಟೊಂದು ರೋಚಕತೆ ಸೃಷ್ಟಿಸಿದ ಪಂದ್ಯ ಮತ್ತೊಂದು ಇಲ್ಲವೇನೋ. ಆದ್ರೆ, ಇಡೀ ಪಂದ್ಯದ ಒಟ್ಟಾರೆ ಬೌಂಡರಿಗಳ ಆಧಾರದ ಮೇಲೆ ಇಂಗ್ಲೆಂಡ್ ಟೀಂಗೆ ವಿಶ್ವಕಪ್ ನೀಡಲಾಯ್ತು.

Image result for england and new zealand world cup 2019

50 ಓವರ್ ಗಳಲ್ಲಿ ಇಂಗ್ಲೆಂಡ್ 24 ಬೌಂಡರಿ ಗಳಿಸಿದ್ರೆ, ನ್ಯೂಜಿಲೆಂಡ್ 16 ಬೌಂಡರಿಗಳನ್ನ ಗಳಿಸಿತ್ತು. ಆದ್ರೆ, ಸೂಪರ್ ಓವರ್ ಸಹ ಟೈಯಾದ್ರೂ ಇಂಗ್ಲೆಂಡ್ ಟೀಂಗೆ ಗೆಲುವು ನೀಡಿರೋದು ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಗಳನ್ನ ಕೇಳ್ತಿದ್ದಾರೆ. ಮಳೆಯಿಂದ ಪಂದ್ಯ ರದ್ದಾದ್ರೆ, ಜಂಟಿಯಾಗಿ ಜಯವನ್ನ ಘೋಷಣೆ ಮಾಡಲಾಗ್ತಿತ್ತು. ಅದರಂತೆ ಇದನ್ನ ಸಹ ಮಾಡಬೇಕಾಗಿತ್ತು ಅಂತಿದ್ದಾರೆ.

ಬೌಂಡರಿಗಳ ಆಧಾರದ ಮೇಲೆ ಗೆಲುವು ನಿರ್ಧಾರ ಮಾಡಿರೋದು ಎಷ್ಟು ಸರಿ. ಅವರು ಬೌಂಡರಿ ಮೂಲಕವೇ ರನ್ ಗಳಿಸಲಿ. ಓಡಿಯಾದ್ರೂ ರನ್ ಗಳಿಸಲಿ. ಒಟ್ಟಿನಲ್ಲಿ ಟಾರ್ಗೆಟ್ ಸಮಬಲವಾದಾಗ ಇಬ್ಬರನ್ನ ಪರಿಗಣಿಸಬೇಕಿತ್ತು ಅನ್ನೋ ಮಾತುಗಳು ಕೇಳಿ ಬರ್ತಿವೆ.




Leave a Reply

Your email address will not be published. Required fields are marked *

error: Content is protected !!