ನಭೋ ಮಂಡಲ ಸೇರದ ‘ಬಾಹುಬಲಿ’

364

ಶ್ರೀಹರಿಕೋಟಾ: ಇಂದು ನಸುಕಿನ ಜಾವ 2.15ಕ್ಕೆ ನಭಕ್ಕೆ ಹಾರಬೇಕಿದ್ದ ಚಂದ್ರಯಾನ-2, ತಾಂತ್ರಿಕ ಕಾರಣಗಳಿಂದ ಕೊನೆಯ ಕ್ಷಣದಲ್ಲಿ ರದ್ದಾಗಿದೆ ಅಂತಾ ಇಸ್ರೋ ತಿಳಿಸಿದೆ.

ಚಂದ್ರಯಾನ-2 ಉಡಾವಣೆ ಮಾಡಲು ಇನ್ನೂ ಒಂದು ಘಂಟೆ ಸಮಯವಿದ್ದ ಟೈಂನಲ್ಲಿ ತಾಂತ್ರಿಕ ದೋಷ ಇರೋದು ಕಂಡು ಬಂದಿದೆ. ಹೀಗಾಗಿ ಇದನ್ನ ರದ್ದು ಮಾಡಲಾಗಿದೆ ಅಂತಾ ಇಸ್ರೋ ಟ್ವೀಟ್ ಮಾಡಿದೆ. ಚಂದ್ರಯಾನ-2 ಮಹತ್ವದ ಯೋಜನೆಯಾಗಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆಯನ್ನ ಇಳಿಸುವ ಪ್ಲಾನ್ ಆಗಿದೆ. ಒಂದು ವೇಳೆ ಈ ಉಡಾವಣೆ ಯಶಸ್ವಿಯಾದ್ರೆ, ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಭಾರತವಾಗಲಿದೆ.

Image result for Chandrayaan-2 mission

ರಾಕೆಟ್ ಉಡಾವಣೆ ಸಲುವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ಸಂಜೆಯೇ ಶ್ರೀಹರಿಕೋಟಾಗೆ ಬಂದಿದ್ರು. ಕೇಂದ್ರ ಹಾಗೂ ಆಂಧ್ರ ಸರ್ಕಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈಗ ರದ್ದಾಗಿರುವ ಉಡಾವಣೆಯ ದಿನಾಂಕ ಹಾಗೂ ಸಮಯವನ್ನ ಆದಷ್ಟು ಬೇಗ ಇಸ್ರೂ ತಿಳಸಲಿದೆ.




Leave a Reply

Your email address will not be published. Required fields are marked *

error: Content is protected !!