ಪ್ರಜಾಪ್ರಭುತ್ವಕ್ಕಿಂತ ಸರ್ವಾಧಿಕಾರ ಮೇಲು: ‘ಅರ್ಜುನ್ ರೆಡ್ಡಿ’

301

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನವದೆಹಲಿ: ಚಿತ್ರರಂಗದಲ್ಲಿ ಒಂದೆರಡು ಹಿಟ್ ಸಿನಿಮಾಗಳನ್ನ ನೀಡಿ, ಸ್ಟಾರ್ ಪಟ್ಟ ಸಿಕ್ಕಮೇಲೆ ಕೆಲವರು ಏನ್ ಮಾತ್ನಾಡ್ತಿದ್ದಾರೆ ಅನ್ನೋ ಪರಿಜ್ಞಾನ ಸಹ ಇರೋದಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಮಾತ್ನಾಡಿ ತಮ್ಮ ವ್ಯಕ್ತಿತ್ವ ಎಂತಹದ್ದು ಅನ್ನೋದು ತೋರಿಸ್ತಾರೆ. ಅಂತವರ ಸಾಲಿಗೆ ತೆಲುಗು ನಟ ವಿಜಯ ದೇವರಕೊಂಡ ಸೇರಿಕೊಂಡಿದ್ದಾರೆ.

ಫಿಲ್ಮ್ ಕ್ಯಾಂಪೇನ್ ಸಲುವಾಗಿ ಭಾರಧ್ವಾಜ್ ರಂಗರಾಜನ್ ಹಾಗೂ ಅನುಪಮಾ ಚೋಪ್ರಾ ನಡೆಸಿದ ಸಂದರ್ಶನದಲ್ಲಿ, ನಟ ವಿಜಯ ದೇವರಕೊಂಡ ಪ್ರಜಾಪ್ರಭುತ್ವಕ್ಕಿಂತ ಸರ್ವಾಧಿಕಾರಿ ಆಡಳಿತ ಮೇಲು ಎಂದು ಹೇಳಿದ್ದಾರೆ. ಮುಂದುವರೆದು ಮಾತ್ನಾಡಿದ ವಿಜಯ, ಎಲ್ಲರಿಗೂ ಮತದಾನದ ಹಕ್ಕು ಇರಬಾರದಂತೆ. ಶ್ರೀಮಂತರು ವೋಟ್ ಮಾಡುವ ವಶ್ಯಕತೆಯಿಲ್ಲ. ಮಧ್ಯಮ ವರ್ಗದವರು, ವಿದ್ಯಾವಂತರಿಗೆ ವೋಟ್ ಹಾಕುವ ಅಧಿಕಾರವಿರಬೇಕಂತೆ. ವಿಮಾನ ಯಾರು ಹಾರಿಸಬೇಕು ಅನ್ನೋದು ಮತ ಚಲಾಯಿಸುವವರು ನಿರ್ಧರಿಸುವುದಿಲ್ಲವೆಂದು ಸಂಬಂಧವೇ ಇಲ್ಲದ ಉದಾಹರಣೆ ನೀಡಿದ್ದಾರೆ. ಹೀಗಾಗಿ ತನ್ಗೆ ಕೇಳಿದ್ರೆ ಸರ್ವಾಧಿಕಾರಿ ಆಡಳಿತ ಮೇಲು. ಯಾವುದೇ ವಿರೋಧವಿಲ್ಲದೆ ಆದೇಶಗಳನ್ನ ಜಾರಿಗೊಳಿಸಬಹುದು. ಮುಂದಿನ 5-10 ವರ್ಷಗಳಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತೆ ಎಂದು ಅಪ್ರಬುದ್ಧವಾಗಿ ಮಾತ್ನಾಡಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಅಕ್ಟೋಬರ್ 1ರಂದು ನಡೆದ ಕ್ಯಾಂಪೇನ್ ಸಂದರ್ಶನದ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ರಾಜಕೀಯ ಸೇರುವ ಆಸಕ್ತಿ ಇದೆಯೇ, ಮುಂದಿನ ದಿನಗಳಲ್ಲಿ ಯಾವುದಾದ್ರೂ ಪಕ್ಷ ಸೇರುತ್ತೀರಾ ಅನ್ನೋ ಪ್ರಶ್ನೆಗೆ ಇಷ್ಟೊಂದು ವಿವಾದಾತ್ಮಕ ಮಾತುಗಳನ್ನ ನಟ ವಿಜಯ ದೇವರಕೊಂಡ ಆಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!