ಪತಿ ನಿರ್ದೇಶನದಲ್ಲಿ ಜೆನಿಲಿಯಾ ಕಂ ಬ್ಯಾಕ್

218

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ನಟಿ ಜೆನಿಲಿಯಾ ಒಂದು ಕಾಲದಲ್ಲಿ ಸಾಕಷ್ಟು ಬ್ಯುಸಿ ನಟಿ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದರು. ಶಿವಣ್ಣ ಅಭಿನಯದ ಸತ್ಯ ಇನ್ ಲವ್ ಚಿತ್ರದ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟು ಹೋದರು. 2012ರಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಜೊತೆ ಮದುವೆಯಾದ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿಲ್ಲ.

ಬರೋಬ್ಬರಿ 10 ವರ್ಷಗಳ ಬಳಿಕ ನಟಿ ಜೆನಿಲಿಯಾ ಡಿಸೋಜಾ ನಟನೆಗೆ ವಾಪಸ್ ಆಗಿದ್ದಾರೆ. ಅದು ಅವರ ಪತಿ ನಟ ರಿತೇಶ್ ದೇಶಮುಖ್ ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರದಲ್ಲಿ. ಯೆಸ್, ಮರಾಠಿಯಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿರುವ ನಟ ರಿತೇಶ್ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಕೊಂಡಿರುವ ನಟ ರಿತೇಶ್, 20 ವರ್ಷಗಳ ನನ್ನ ಸಿನಿ ಬದುಕಿನಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದೇನೆ. ಅದರಲ್ಲಿ ನನ್ನ ಪತ್ನಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮ್ಮಲ್ಲರ ಆಶೀರ್ವಾದ ಬೇಕು ಎಂದಿದ್ದಾರೆ. ಇನ್ನು ಈ ಚಿತ್ರಕ್ಕೆ ‘ವೇಡ್’ ಎಂದು ಹೆಸರು ಇಡಲಾಗಿದೆ. 2022ರ ಆಗಸ್ಟ್ 12ರಿಂದ ಚಿತ್ರ ಬಿಡುಗಡೆ ಮಾಡಲು ಟಾರ್ಗೆಟ್ ಇಟ್ಟುಕೊಂಡು ಕೆಲಸಕ್ಕೆ ಮುಂದಾಗಿದ್ದಾರೆ. ಈ ಜೋಡಿಗೆ ಬಾಲಿವುಡ್ ಮಂದಿ ಸೇರಿದಂತೆ ಅವರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!