ಒಟ್ಟಿಗೆ ಮತ ಚಲಾಯಿಸಿದ 22 ಗ್ರಾ.ಪಂ ಸದಸ್ಯರು.. ಇದುವರೆಗಿನ ವರದಿ ಹೀಗಿದೆ..

253

ಪ್ರಜಾಸ್ತ್ರ ಸುದ್ದಿ

ವಿಜಯಪುರ: ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನೂತನ ತಾಲೂಕು ಆಲಮೇಲನ ಮೋರಟಗಿ ಗ್ರಾಮ ಪಂಚಾಯ್ತಿಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಇಲ್ಲಿನ ಗ್ರಾಮ ಪಂಚಾಯ್ತಿಯ 22 ಜನ ಸದಸ್ಯರು ಒಟ್ಟಿಗೆ ಮತದಾನ ಮಾಡಿದ್ದಾರೆ. ಇನ್ನು ಸಿಂದಗಿ ಹಾಗೂ ಆಲಮೇಲ ತಾಲೂಕಿನಲ್ಲಿ ಮುಂಜಾನೆ 8 ಗಂಟೆಯಿಂದ 10 ಗಂಟೆಯ ತನಕ ನಡೆದ ಮತದಾನದ ವಿವರ ಹೀಗಿದೆ..

ಕೋರಹಳ್ಳಿ 1, ಗಬಸಾವಳಗಿ 2, ದೇವಣಗಾಂವ 3, ದೇವರನಾವದಗಿ 1, ಬೊಮ್ಮನಹಳ್ಳಿ 2, ರಾಮನಹಳ್ಳಿ 5, ಸಿಂದಗಿ 1, ಗೋಲಗೇರಿ 17, ಯಂಕಂಚಿ 17, ಸುಂಗಠಾಣ 8, ಹಿಕ್ಕನಗುತ್ತಿ 1 ಹಾಗೂ ಹೊನ್ನಳ್ಳಿಯಲ್ಲಿ 6 ಜನ ಸದಸ್ಯರು ವೋಟ್ ಮಾಡಿದ್ದಾರೆ. ಒಟ್ಟು 450 ಜನ ಸದಸ್ಯರಲ್ಲಿ 64 ಸದಸ್ಯರು ವೋಟ್ ಹಾಕಿದ್ದಾರೆ. ಹಂದಿಗನೂರು, ರಾಂಪೂರ ಪಿಎ, ಬ್ಯಾಕೋಡ, ನಾಗಾವಿ ಬಿ.ಕೆ, ಚಟ್ಟರಕಿ, ಗುಬ್ಬೇವಾಡ, ಕೊಕ್ಕಟನೂರ, ಮೋರಟಗಿ, ಮಲಘಾಣ, ಬಗಲೂರ, ಕಡಣಿ, ಕಕ್ಕಳಮೇಲಿಯಲ್ಲಿ ಬೆಳಗ್ಗೆ 10 ಗಂಟೆಯ ತನಕ ಯಾರು ಮತದಾನ ಮಾಡಿಲ್ಲವೆಂದು ತಿಳಿದು ಬಂದಿದೆ. ಇದರ ನಂತರದ ವರದಿ ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!