ತಾಪ್ಸಿ ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲವೆಂದಿದ್ಯಾಕೆ?

303

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಹುಭಾಷಾ ನಟಿ ತಾಪ್ಸಿ ಪನ್ನಾ ನೇರ ಮಾತುಗಳಿಂದ ಸಹ ಸುದ್ದಿಯಲ್ಲಿರುವವರು. ಈಗ ಅವರ ನೇರ ಮಾತಿನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನು ಅಂದರೆ, ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲವೆಂದು ಹೇಳಿರುವುದು.

ಇಷ್ಟಕ್ಕೂ ನಟಿ ತಾಪ್ಸಿ ಹೀಗೆ ಹೇಳಲು ಕಾರಣ, ಮಾಧ್ಯಮದವರು ತಾಪ್ಸಿಗೆ ಕಾಫಿ ವಿತ್ ಕರಣ್ ಶೋಗೆ ಹೋಗುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ತಾಪ್ಸಿ ನನ್ನ ಲೈಂಗಿಕ ಜೀವನ ಹೆಚ್ಚು ಆಸಕ್ತಿಕರವಾಗಿಲ್ಲ. ಹೀಗಾಗಿ ನನ್ನನ್ನು ಕಾಫಿ ವಿತ್ ಶೋಗೆ ಕರೆದಿಲ್ಲ ಎನ್ನುವ ಮೂಲಕ ಚಾಟಿ ಬೀಸಿದ್ದಾರೆ.

ಈ ಶೋಗೆ ಬರುವ ನಟ, ನಟಿಯರಿಗೆ ಅವರ ಅಪ್ ಕಮಿಂಗ್ ಮೂವಿ ಬಗ್ಗೆ ಕೇಳಲಾಗುತ್ತೆ. ಈ ಮೂಲಕ ಪ್ರಚಾರ ನಡೆಸಲಾಗುತ್ತೆ. ಇಲ್ಲಿಗೆ ಬರುವ ನಟ, ನಟಿಯರ ತೀರ ಖಾಸಗಿ ವಿಚಾರಗಳನ್ನು ಪ್ರಶ್ನಿಸುವುದು ಪ್ರಚಾರದ ಇನ್ನೊಂದು ಗಿಮಿಕ್ ಎನ್ನಲಾಗುತ್ತೆ. ಹೀಗಾಗಿ ಅದು ವಿವಾದ ಪಡೆದುಕೊಂಡು ಸೋಷಿಯಲ್ ಮೀಡಿಯಾ ಮೂಲಕ ವ್ಯಾಪಾಕ ಪ್ರಚಾರ ಪಡೆದುಕೊಳ್ಳುತ್ತೆ. ಹೀಗಾಗಿ ಈ ಶೋ ಬಗ್ಗೆ ಅನೇಕರ ಅಪಸ್ವರವಿದೆ.




Leave a Reply

Your email address will not be published. Required fields are marked *

error: Content is protected !!