ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ ಕಶ್ಯಪ, ವಿಕಾಸ ಬಹ್ಲು ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈ ಸೇರಿದಂತೆ ಇತರೆ ಕಡೆ ಆಸ್ತಿಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಲಾಗ್ತಿದೆ.
ಕೆಲ ಮಾಹಿತಿಗಳ ಪ್ರಕಾರ ಪ್ಯಾಂಟಮ್ ಸಿನಿಮಾದಲ್ಲಿ ನಟಿಸಿರುವ ಇವರು ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರಂತೆ.