ನಟಿಯರಿಬ್ಬರ ನಡುವೆ ಕಿಚ್ಚು ಹಚ್ಚಿದ ‘ಬಿ’ ಗ್ರೇಡ್

338

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಜಗತ್ತಿನಲ್ಲಿ ಇದೀಗ ನೆಪೋಟಿಸಂ ಚರ್ಚೆ ಜೋರಾಗಿದೆ. ನಟ ಸುಶಾಂತ ಸಾವಿನ ಬಳಿಕ, ಸ್ವಜನಪಕ್ಷಪಾತದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದರಲ್ಲಿ ನಟಿ ಕಂಗನಾ ರಣಾವತ್ ಮುಂದೆ ಇದ್ದಾಳೆ. ಹೀಗಾಗಿ ಈ ವಿಡಿಯೋ ಮಾಡಿ ಬಿಡ್ತಿರುವ ನಟಿ ಕಂಗನಾ, ಕೆಲವರನ್ನ ಕೊಲೆಗಾರರು ಹಾಗೂ ಬಾಲಿವುಡ್ ಮಾಫಿಯಾ ಎಂದಿದ್ದಾಳೆ.

ನೆಪೋಟಿಸಂ ವಿಚಾರವಾಗಿ ಅನೇಕ ಸ್ಟಾರ್ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರ ಹೆಸರುಗಳು ಕೇಳಿ ಬಂದಿವೆ. ಅದರಲ್ಲಿ ಕರಣ್ ಜೋಹರ್ ಸಹ ಒಬ್ರು. ಜೋಹರ್ ವಿಚಾರದಲ್ಲಿ ನಟಿ ತಾಪ್ಸಿ ಪನ್ನು, ಅವರನ್ನ ಇಷ್ಟಪಡುವುದಾಗಿ ಹೇಳಿದ್ದಾಳೆ. ಈ ಬಗ್ಗೆ ಮಾತ್ನಾಡಿದ ಕಂಗನಾ, ತಾಪ್ಸಿ, ಸ್ವರಾ ಭಾಸ್ಕರ ಯಾಕೆ ಇನ್ನು ಬಿ ಗ್ರೇಡ್ ನಟಿಯರು. ಅವರ ಗ್ರೇಡ್ ಯಾಕೆ ಏರಿಕೆಯಾಗಿಲ್ಲ ಎಂದಿದ್ದಾಳೆ.

ಇದಕ್ಕೆ ತಿರುಗೇಟು ನೀಡಿರುವ ತಾಪ್ಸಿ, 10 ಹಾಗೂ 12ನೇ ತರಗತಿ ರಿಸಲ್ಟ್ ಬಂದ್ಮೇಲೆ ಫಲಿತಾಂಶ ಬಂದಿದೆಯಂತೆ. ಈಗ ನಮ್ಮ ಗ್ರೇಡ್ ಅಧಿಕೃತವಾಗಿದೆ. ಇಲ್ಲಿಯವರೆಗೂ ನಂಬರ್ ಪದ್ಧತಿಯಿಂದ ಮೌಲ್ಯ ನಿರ್ಧಾರವಾಗ್ತಿತ್ತು ಅಲ್ವಾ ಎಂದು ವ್ಯಂಗ್ಯವಾಡಿದ್ದಾಳೆ. ಇದಕ್ಕೆ ಹಲವು ನಟಿಯರು ಸಾಥ್ ನೀಡಿದ್ದಾರೆ. ಹೀಗಾಗಿ ಸಾಮೂಹಿಕವಾಗಿದ್ದ ವಿಚಾರ ಈಗ ವೈಯಕ್ತಿಕ ಮಟ್ಟಕ್ಕೆ ಇಳಿದಿದೆ. ಇದ್ರಿಂದಾಗಿ ನಟಿಯರಿಬ್ಬರು ಕಿತ್ತಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!