ಜೂ.21ರಿಂದ ಅನ್ ಲಾಕ್ 2.0 ಬಗ್ಗೆ ಸಿಎಂ ಹೇಳೋದೇನು

289

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜೂನ್ 21ಕ್ಕೆ ಕರೋನಾ ಲಾಕ್ ಡೌನ್ ಅಂತ್ಯವಾಗುತ್ತಾ ಮುಂದುವರೆಯುತ್ತಾ ಅನ್ನೋದು ಇಂದು ಸಂಜೆ ತಿಳಿಯಲಿದೆ. ಹಲವು ಸಡಲಿಕೆಗಳೊಂದಿಗೆ ಅನ್ ಲಾಕ್ 1.0 ಘೋಷಿಸಲಾಯ್ತು. ಇದೀಗ ಅನ್ ಲಾಕ್ 2.0 ಸಮಯ. ಹೀಗಾಗಿ ಸಂಜೆ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ.

ಅಗತ್ಯ ಸೇವೆಗಳ ಅವಧಿಯನ್ನ ಮಧ್ಯಾಹ್ನ 2 ಗಂಟೆಯವರೆಗೆ ನೀಡಲಾಗಿದೆ. ಇದನ್ನ ಇನ್ನಷ್ಟು ಹೆಚ್ಚಿಸಲಾಗುತ್ತಾ? ಆಟೋ, ಟ್ಯಾಕ್ಸಿ ಸೇವೆಗೆ ಅವಕಾಶವಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಅನುಮಾಡಿ ಕೊಡಲಾಗುತ್ತಾ? ದಿನಸಿ, ಹೋಟೆಲ್, ತರಕಾರ, ಹಣ್ಣು, ಹಾಲು, ಕೃಷಿ ಅಂಗಡಿಗಳಂತೆ ಇತರೆ ಅಂಗಡಿಗಳು ತೆರೆಯಲು ಅನುವ ಮಾಡಿಕೊಡಲಾಗುತ್ತಾ?

ಗಾರ್ಮೆಂಟ್ಸ್, ಕೈಗಾರಿಕೆಗಳಿಗೆ ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಇನ್ನಷ್ಟು ಸಡಿಲಿಕೆ ಮಾಡಲಾಗುತ್ತಾ? 8 ಜಿಲ್ಲೆಗಳಲ್ಲಿ ಮುಂದುವರೆಸಿರುವ ಕಟ್ಟುನಿಟ್ಟಿನ ಲಾಕ್ ಡೌನ್ ನಲ್ಲಿ ವಿನಾಯಿತಿ ನೀಡಲಾಗುತ್ತಾ? ಅನ್ನೋದು ಸೇರಿದಂತೆ ಸಾರ್ವಜನಿಕರಲ್ಲಿ ಮೂಡಿರುವ ಹಲವು ಪ್ರಶ್ನೆಗಳಿಗೆ ಸಂಜೆ ಸಿಎಂ ಯಡಿಯೂರಪ್ಪ ಉತ್ತರ ನೀಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!