ಅಕ್ಕಮಹಾದೇವಿ ವಿವಿ ವಿದ್ಯಾರ್ಥಿಗಳ ಧರಣಿ

546

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಅವೈಜ್ಞಾನಿಕವಾಗಿ ಪರೀಕ್ಷೆ ನಡೆಸಲು ಮುಂದಾಗಿರುವ ವಿಶ್ವವಿದ್ಯಾಲಯದ ವಿರುದ್ಧ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಯುಜಿಸಿ ನಿಯಮಗಳನ್ನ ಉಲ್ಲಂಘಿಸಿ ಸೆಮಿಸ್ಟರ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಆಡಳಿತ ಭವನದ ಎದುರು ಸೇರಿರುವ ನೂರಾರು ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ದೇ ಧರಣಿ ಸಹ ಶುರು ಮಾಡಿದ್ದಾರೆ.

ಘಟನೆ ಹಿನ್ನೆಲೆ ಏನು?

ಆಗಸ್ಟ್ 31, 2021ರೊಳಗೆ ವಿಶ್ವ ವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆ ಪೂರ್ಣಗೊಳಿಸಲು ಯುಜಿಸಿ ಸೂಚಿಸಿದೆ. ಹೀಗಾಗಿ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನ ರದ್ದುಗೊಳಿಸಿ ಆಂತರಿಕ ಮೌಲ್ಯಮಾಪನದ ಮೇರೆಗೆ ಬಡ್ತಿ ನೀಡಲು ತಿಳಿಸಲಾಗಿದೆ. ಆದ್ರೆ, ವಿಶ್ವ ವಿದ್ಯಾಲಯಗಳು ತಿಂಗಳ ಅಂತರದಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಲು ಮುಂದಾಗಿವೆ.

ವಿಶ್ವವಿದ್ಯಾಯಗಳ ಈ ಕ್ರಮದಿಂದ ವಿದ್ಯಾರ್ಥಿಗಳಿಗೆ ಒತ್ತಡಕ್ಕೆ ಒಳಗಾಗಿದ್ದಾರೆ. ಕೂಡಲೇ ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ಅಂತಿಮ ವರ್ಷದ ಪರೀಕ್ಷೆ ಮಾತ್ರ ನಡೆಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಭಯಾ ದಿವಾಕರ, ಕಾವೇರಿ ರಜಪೂತ, ತೇಜಸ್ವಿನಿ ಎಸ್, ಲಕ್ಷ್ಮಿ ಬಿ, ಅನುಜಾ, ಮೀನಾಕ್ಷಿ, ರಾಜೇಶ್ವರಿ ಕಡಪಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!